ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ ಸಾಧಿಸಿದ್ದು, ನೋಟಾ ಮತಗಳು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.
ಡಾ.ಕೆ.ಸುಧಾಕರ್ ಗೆ ಟಿಕೆಟ್ ಕೊಡುವುದೇ ಬೇಡ ಎಂಬ ಮಾತುಗಳು ಕೇಳಿಬಂದಿದ್ದವು. ಸುಧಾಕರ್ ಒಂದು ಮತ ಹೆಚ್ಚಿಗೆ ಪಡೆದರೂ, ರಾಜೀನಾಮೆ ಕೊಡುತ್ತೇನೆ ಎಂದು ಚಾಲೆಂಜ್ ಮಾಡಿದ್ದರು. ಈ ನಡುವೆ ಕೆ.ಸುಧಾಕರ್, ಮೊದಲ ಸ್ಥಾನದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿರುವ ಸುಧಾಕರ್ 3 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡು, ಎರಡನೇ ಸ್ಥಾನದಲ್ಲಿದ್ದಾರೆ.
ಚಿಕ್ಕಬಳ್ಳಾಪುರದ ಜನತೆ ಈ ಎರಡು ಪಕ್ಷಗಳನ್ನು ತಿರಸ್ಕರಿಸಿ, ಮೂರನೇ ಸ್ಥಾನದಲ್ಲಿ ನೋಟಾ ಮತಗಳು ಪಡೆದುಕೊಂಡಿವೆ. 2,352 ಮತಗಳನ್ನು ನೋಟಾ ಪಡೆದುಕೊಳ್ಳುವ ಮೂಲಕ ಜನತೆ 3 ನೇ ಆಯ್ಕೆಯನ್ನು ನೋಟವನ್ನಾಗಿಯೇ ಉಳಿಸಿಕೊಂಡಿದ್ದಾರೆ.

