ರಾಜಕೀಯ ಸುದ್ದಿ

ಬಿಜೆಪಿಯ ಬಣ್ಣ ಬಯಲಾಗಿದೆ ಸಾಕು ಈ ಸರ್ಕಸ್ ನಿಲ್ಲಿಸಿ : ಬಿಜೆಪಿಗೆ ತಿರುಗೇಟು ಕೊಟ್ಟ ಎಎಪಿ

Share It

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿರುವುದನ್ನು ಎಎಪಿ ಸ್ವಾಗತಿಸಿದ್ದು, ‘ಸತ್ಯವೊಂದೇ ಜಯಶಾಲಿ’ ಎಂದು ಪ್ರತಿಪಾದಿಸಿದೆ. ಪಕ್ಷದ ನಾಯಕತ್ವವು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹಗರಣದ ಆರೋಪಗಳನ್ನು ‘ಪಿತೂರಿ’ ಎಂದು ಕರೆದಿದೆ.

ಈಗ ರದ್ದಾದ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಂತರ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ದೆಹಲಿಯಲ್ಲಿ ರಾಜಕೀಯ ಮಾತಿನ ಸಮರ ತಾರಕಕ್ಕೇರಿದೆ. ಎಎಪಿ ಈ ತೀರ್ಪನ್ನು ಸಂಭ್ರಮಿಸಿದ್ದು, ಉನ್ನತ ನ್ಯಾಯಾಲಯವು “ಬಿಜೆಪಿಯ ಪಿತೂರಿಯನ್ನು ಬಹಿರಂಗಪಡಿಸಿದೆ” ಎಂದು ಪ್ರತಿಪಾದಿಸಿದಾಗ, ಕೇಸರಿ ಪಕ್ಷವು ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿತ್ತು.

“ಸತ್ಯಮೇವ ಜಯತೆ” (ಸತ್ಯವೊಂದೇ ಜಯಗಳಿಸುತ್ತದೆ) ಎಂಬುದು ಎಎಪಿಯ ಮೊದಲ ಪ್ರತಿಕ್ರಿಯೆಯಾಗಿದ್ದು, ಸುಪ್ರೀಂ ಕೋರ್ಟ್‌ನ ಆದೇಶವನ್ನು ಸ್ವಾಗತಿಸಿದೆ. ಕೇಜ್ರಿವಾಲ್ ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿರುವ ಪಕ್ಷವು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ “ಸತ್ಯಮೇವ್ ಜಯತೆ” ಎಂದು ಬರೆದಿದೆ.

ಮುಖ್ಯಮಂತ್ರಿಗೆ ಜಾಮೀನು ಸಿಕ್ಕಿದೆಯೇ ಹೊರತು ಖುಲಾಸೆಗೊಂಡಿಲ್ಲ ಎಂದು ಹೇಳುವ ಮೂಲಕ ಎಎಪಿ ವಿರುದ್ಧ ಬಿಜೆಪಿ ತಿರುಗೇಟು ನೀಡಿದೆ.


Share It

You cannot copy content of this page