ಆತ್ಮಹ* ಮಾಡಿಕೊಂಡ ಗುತ್ತಿಗೆದಾರ ಪಿ.ಎಸ್.ಗೌಡರ್ ‘ಡೆತ್ ನೋಟ್’ ಪತ್ತೆ

dd
Share It

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ಕಳೆದ ಮೇ 26 ರಂದು ಆತ್ಮಹ* ಮಾಡಿಕೊಂಡ ಗುತ್ತಿಗೆದಾರ ಪಿ‌.ಎಸ್.ಗೌಡರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಕಳೆದ ಬಿಜೆಪಿ-ಜೆಡಿಎಸ್ ರ‍್ಕಾರದ ಅವಧಿಯಲ್ಲಿ ಸಂತೇಬೆನ್ನೂರಿ‌ನ ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ ತಾನು ನಡೆಸಿದ್ದ ಗುತ್ತಿಗೆ ಕಾಮಗಾರಿ ಬಿಲ್ ಇನ್ನೂ ಪಾವತಿಸಿಲ್ಲ ಎಂದು ಗುತ್ತಿಗೆದಾರ ಪಿ‌.ಎಸ್.ಗೌಡರ್ ಅವರು KRIDL ಗೆ ದೂರು ನೀಡಿದ್ದರು. ಗುತ್ತಿಗೆದಾರ ಪಿ.ಎಸ್.ಗೌಡರ್ ಅವರ ತಂದೆ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.

ಇಷ್ಟಾದರೂ ತನಗೆ ಕೆಲಸ ಮಾಡಿ ಪೂರೈಸಿಕೊಟ್ಟಿದ್ದ ಕಾಮಗಾರಿಗೆ ನೀಡಬೇಕಿದ್ದ 5 ಲಕ್ಷ ರೂಪಾಯಿ ಬಿಲ್ ಪಾವತಿಸಿಲ್ಲ ಎಂದು ಬೇಸತ್ತ ಗುತ್ತಿಗೆದಾರ ಪಿ.ಎಸ್. ಗೌಡರ್(48) ಅವರು ಡೆತ್ ನೋಟ್ ಬರೆದಿಟ್ಟು ಕಳೆದ ಮೇ26 ರಂದು ಸಂತೇಬೆನ್ನೂರಿನಲ್ಲಿ ಆತ್ಮಹ* ಮಾಡಿಕೊಂಡರು.
ಇದೀಗ ಮೃತ ಗುತ್ತಿಗೆದಾರ ಪಿ.ಎಸ್.ಗೌಡರ್ ತಾನು ಆತ್ಮಹ* ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.

ತನಗೆ ಸಿಗಬೇಕಿದ್ದ ಕಾಮಗಾರಿಯ 5 ಲಕ್ಷ ರೂಪಾಯಿ ಬಿಲ್ ಅನ್ನು ಬಾಕಿ ಉಳಿಸಿಕೊಳ್ಳಲಾಗಿದೆ ಮತ್ತು ಇಬ್ಬರು ಸಹೋದರರು ಕೂಡ ತನಗೆ ವಂಚಿಸಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಪಿ.ಎಸ್.ಗೌಡರ್ ಬರೆದಿದ್ದಾರೆ. ಆದಾಗ್ಯೂ ತನಗೆ ಕೊಡಬೇಕಿರುವ 5 ಲಕ್ಷ ರೂಪಾಯಿ ಗುತ್ತಿಗೆ ಬಿಲ್ ಜೊತೆಗೆ ಕೆ.ಆರ್.ಐ.ಡಿ.ಎಲ್.ನಿಂದ ದೊಡ್ಡ ಮೊತ್ತದ ಪರಿಹಾರ ನೀಡಬೇಕೆಂದು ಮೃತ ಗುತ್ತಿಗೆದಾರ ಪಿ.ಎಸ್.ಗೌಡರ್ ಬರೆದಿದ್ದ ಡೆತ್ ನೋಟ್ ಈಗ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮೃತ ಗುತ್ತಿಗೆದಾರ ಪಿ‌.ಎಸ್. ಗೌಡರ್ ಅವರ ಪತ್ನಿ ವಸಂತಕುಮಾರಿ ಅವರು ಸಂತೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಪಿ.ಎಸ್.ಗೌಡರ್ ಆತ್ಮಹ* ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.


Share It

You cannot copy content of this page