ಮತ್ತೆರಡು ಪ್ರಕರಣ:ಜೂನ್ 7 ಕ್ಕೆ ತೀರ್ಮಾನ
ಬೆಂಗಳೂರು: ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿರುವ 3 ಪ್ರಕರಣಗಳ ಪೈಕಿ ಒಂದರಲ್ಲಿ ಮಾತ್ರವೇ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿರುವ ನ್ಯಾಯಾಲಯ ಇನ್ನೆರೆಡು ಪ್ರಕರಣಗಳ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿದೆ.
ಎಸ್‌ಐಟಿ ಒಂದು ಪ್ರಕರಣದಲ್ಲಷ್ಟೇ ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಏಳು ದಿನಗಳ ಕಸ್ಟಡಿಗೆ ಆದೇಶಿಸಿದೆ. ಆದರೆ, ಇನ್ನುಳಿದ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಪ್ರಜ್ವಲ್ ರೇವಣ್ಣ ಪರ ವಕೀಲರು ಪ್ರಯತ್ನ ನಡೆಸಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ಎಸ್‌ಐಟಿ, ಆ ಪ್ರಕರಣಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದೆ.
ಎಸ್‌ಐಟಿ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯ, ಇನ್ನುಳಿದ ಎರಡು ಪ್ರಕರಣಗಳ ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಿದೆ. ಅಷ್ಟರಲ್ಲಿ ಈ ಪ್ರಕರಣದ ಎಸ್‌ಐಟಿ ಬಂಧನವ ಅವಧಿ ಮುಗಿಯಲಿದ್ದು, ಆಗ ನ್ಯಾಯಾಲಯ ಮತ್ತೊಂದು ಪ್ರಕರಣದಲ್ಲಿ ಮತ್ತೇ ಕಸ್ಟಡಿಗೆ ಕೊಡಬಹುದು, 2 ಪ್ರಕರಣಗಳು ಗಂಭಿರವಾಗಿದ್ದು, ಕಸ್ಟಡಿಗೆ ಕೊಡಲು ಅವಕಾಶ ಹೆಚ್ಚಾಗಿರುತ್ತದೆ. ಇದನ್ನು ಮನಗಂಡೇ ಎಸ್‌ಐಟಿ ಹಂತಹಂತವಾಗಿ ಪ್ರಜ್ವಲ್ ರೇವಣ್ಣನನ್ನು ಕಟ್ಟಿಹಾಕಲು ತೀರ್ಮಾನಿಸಿದೆ ಎನ್ನಬಹುದು.
ಎಸ್‌ಐಟಿ ರಚನೆಯಾಗಿ, ಒಂದು ತಿಂಗಳಾದರೂ, ಎಸ್‌ಐಟಿ ಪೊಲೀಸರ ಕೈಗೆ ಸಿಗದೆ ಆಟವಾಡಿಸಿದ ಪ್ರಜ್ವಲ್, ವಿರುದ್ಧ ಐಎಸ್‌ಟಿ ಅಗತ್ಯ ಕ್ರಮಗಳನ್ನೆಲ್ಲ ಕೈಗೊಳ್ಳುತ್ತಿದೆ. ಒಂದೇ ಬಾರಿ ಮೂರು ಪ್ರಕರಣಗಳಲ್ಲಿ ಕಸ್ಟಡಿಗೆ ಕೇಳುವ ಬದಲು, ಹಂತಹಂತವಾಗಿ ಕಸ್ಟಡಿಗೆ ಕೇಳುತ್ತಾ, ಹೆಚ್ಚಿನ ಕಾಲ ಪೊಲೀಸ್ ಕಸ್ಟಡಿಗೆ ಪಡೆಯುವ ಯೋಜನೆ ರೂಪಿಸಿದೆ.