ರಾಜಕೀಯ ಸುದ್ದಿ

ಮೋದಿ 3.0 ಸರ್ಕಾರಕ್ಕೆ ಕಗ್ಗಂಟಾಗಿರುವ ಮಿತ್ರಪಕ್ಷಗಳ ಈ ಬೇಡಿಕೆಗಳು

Share It

ನವದೆಹಲಿ: ಇದೇ ಭಾನುವಾರ ಸತತ 3ನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರು ಆರಂಭದಲ್ಲೇ ಸಂಕಷ್ಟ ಎದುರಿಸಬೇಕಾಗಿದೆ. ಏಕೆಂದರೆ ಎನ್.ಡಿ.ಎ ಮೈತ್ರಿಕೂಟದ ಸಭೆಯಲ್ಲಿ ಜೆಡಿಯು ಮತ್ತು ಎಲ್.ಜೆ.ಪಿ ಪಕ್ಷಗಳು ಮೋದಿ ಅವರ ಕನಸಿನ ಯೋಜನೆಯಾದ ‘ಅಗ್ನಿವೀರ್’ ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ‌.

ಅಗ್ನಿವೀರ್ ಯೋಜನೆಯನ್ನೇ ಮೊದಲು ಕೈಬಿಡಬೇಕೆಂದು ಜೆಡಿಯು ಮತ್ತು ಎಲ್.ಜೆ.ಪಿ‌ ಪಕ್ಷಗಳು ಬಿಗಿ ಪಟ್ಟು ಹಿಡಿದಿವೆ. ಜೊತೆಗೆ ದೇಶದಲ್ಲಿ ಜಾತಿಗಣತಿ ನಡೆಸಲೇಬೇಕೆಂದು ಈ ಎರಡೂ ಪಕ್ಷಗಳು ಬೆಂಬಲಕ್ಕೆ ಷರತ್ತು ಹಾಕಿವೆ.
ಜೆಡಿಯು ಪಕ್ಷವು ಕೇಂದ್ರ ಸಂಪುಟದಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ, ರೈಲ್ವೆ, ಹಣಕಾಸು ಸೇರಿ ಹಲವೆಡೆ ಪ್ರಮುಖ ಖಾತೆಗಳನ್ನು ನೀಡಲೇಬೇಕೆಂದು ಪಟ್ಟು ಹಿಡಿದಿದೆ.

ಇದು ಸಾಲದು ಎಂಬಂತೆ ಈ ಬಾರಿ ನಿರ್ಣಾಯಕ 16 ಸಂಸದರನ್ನು ಗೆಲ್ಲಿಸಿಕೊಂಡಿರುವ ತೆಲುಗು ದೇಶಂ ಪಕ್ಷ ಲೋಕಸಭೆಯ ಸ್ಪೀಕರ್ ಸ್ಥಾನ ಬೇಕೆ ಬೇಕೆಂದು ಬೆಂಬಲಕ್ಕೆ ಷರತ್ತು ಹಾಕಿದೆ. ಲೋಕಸಭೆಯ ಸ್ಪೀಕರ್ ಟಿಡಿಪಿಗೆ ಯಾಕೆ ಬೇಕೆ ಎಂದು ಅವಲೋಕಿಸಿದಾಗ ಒಂದು ವೇಳೆ ಟಿಡಿಪಿ ಅಥವಾ ಬೇರೆ ಯಾವುದೇ ಎನ್.ಡಿ.ಎ ಮಿತ್ರ ಪಕ್ಷ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲಿಸಿದರೆ ಆಗ ಮೋದಿ ಸರ್ಕಾರ ಬಹುಮತ ಸಾಬೀತುಪಡಿಸಲು ಲೋಕಸಭೆಯ ಸ್ಪೀಕರ್ ಪಾತ್ರ ನಿರ್ಣಾಯಕ ಪಾತ್ರ ವಹಿಸಲಿದೆ.

ಆಗ ತೆಲುಗು ದೇಶಂ ಪಕ್ಷದ 16 ಸಂಸದರನ್ನು ಅನರ್ಹತೆ ಆಧಾರದ ಮೇಲೆ ಮೋದಿ ಸರ್ಕಾರ ಬಹುಮತ ಸಾಧಿಸಲು ಅವಕಾಶ ಇರಬಾರದು ಎಂದು ಮುಂದಾಲೋಚನೆ ಮಾಡಿ ಚಂದ್ರಬಾಬು ನಾಯ್ಡು ಅವರು ಈಗಲೇ ತಮ್ಮ ಪಕ್ಷಕ್ಕೆ ಲೋಕಸಭೆಯ ಸ್ಪೀಕರ್ ಹುದ್ದೆ ಬೇಕೆ ಬೇಕೆಂದು ಷರತ್ತು ವಿಧಿಸಿದೆ. ಹೀಗಾಗಿ ಒಟ್ಟು 3 ಎನ್.ಡಿ.ಎ ಮಿತ್ರಪಕ್ಷಗಳ ಕಡುಕಷ್ಟಕರವಾಗಿರುವ ಈ ಬೇಡಿಕೆಗಳನ್ನು ಈಡೇರಿಸಲು ಹೇಗೆ ಸಾಧ್ಯ? ಎಂದು ಮೋದಿ ಅವರು ಚಿಂತಾಕ್ರಾಂತರಾಗಿ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.


Share It

You cannot copy content of this page