ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದು, ಪೊಲೀಸರು ಈವರೆಗೆ ಒಂಬತ್ತು ವಾಹನಗಳನ್ನು ಬಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಯೋ ಬೈಕ್, ಹೊಂಡಾ ಆಕ್ಟಿವಾ, ಆಟೋ, ದುಬಾರಿ ಜೀಪ್, ಸ್ಕಾರ್ಪಿಯೋ ಸೇರಿದಂತೆ ಒಂಬತ್ತು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಎಲ್ಲ ವಾಹನಗಳ ಮಾಹಿತಿಯನ್ನು ನೀಡುವಂತೆ ಪತ್ರ ಬರೆದಿದ್ದಾರೆ. ಇದರಿಂದ ಈ ವಾಹನಗಳ ಮೂಲ ಮಾಲೀಕರಿಗೆ ಸಂಕಷ್ಟ ಶುರುವಾಗಿದೆ.
ಕೋರಮಂಗಲ, ಇಂದಿರಾನಗರ, ರಾಜಾಜಿನಗರ, ಯಶವಂತಪುರ ಮತ್ತು ತುಮಕೂರು ಆರ್ ಟಿಒ ಅಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ. ಜತೆಗೆ ರೇಣುಕಾ ಸ್ವಾಮಿ ಅವರನ್ನು ಚಿತ್ರದುರ್ಗದಿಂದ ಕರೆತಂದ ಟಾಟಾ ಇಟಿಯೋಸ್ ಕಾರು, ಅಲ್ಲಿ ಆತನನ್ನು ಕರೆತಂದ ಆಟೋ, ಸಾಕ್ಷ್ಯ ನಾಶದ ನಂತರ ಆರೋಪಿಗಳು ತೆರಳಿದ ಆಟೋ ಸೇರಿ ಅನೇಕ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೀಗ ಮೂಲ ಮಾಲೀಕರನ್ನು ಪತ್ತೆ ಹಚ್ಚಿ ಅವರನ್ನು ಸಾಕ್ಷಿಗಳನ್ನು ಮಾಡಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಆ ಮೂಲಕ ಮತ್ತಷ್ಟು ಪರಿಣಾಮಕಾರಿ ಪ್ರಕರಣವನ್ನು ಕೊಂಡೊಯ್ಯಲು ಪೊಲೀಸರು ತೀರ್ಮಾನಿಸಿದ್ದಾರೆ. ಆ ಮೂಲಕ ದರ್ಶನ್ ಮತ್ತು ಸಹಚಚರಿಗೆ ಪ್ರಕರಣ ಮತ್ತಷ್ಟು ಗಂಭೀರವಾದಂತಾಗಿದೆ.