
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಕೇರಳದಿಂದ ಬಂದಿದ್ದ ಬಾಲಕಿ ಏಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್ ಮತ್ತು ಪೊಲೀಸ್ ತಂಡಗಳ ತೀವ್ರ ಶೋಧ ಕಾರ್ಯದ ನಂತರ ಏಪ್ರಿಲ್ 10 ರಂದು ಮೃತದೇಹ ಸಿಕ್ಕಿದೆ. ತನಿಖೆ ಮುಂದುವರಿದಿದೆ.

