ಶಿವಮೊಗ್ಗ : ತಾಲೂಕಿನ ಜಾವಳ್ಳಿಯಲ್ಲಿ ಅಂಗಡಿಗೆ ಸಿಡಿಲು ಬಡಿದು ಬೆಂಕಿಗೆ ಆಹುತಿಯಾದ ಘಟನೆ ಸಂಭವಿಸಿದೆ.
ವೀರಭದ್ರಪ್ಪ ಎಂಬುವರ ಅಂಗಡಿಯಲ್ಲಿ ಕಾಣಿಸಿಕೊಂಡ ಸಿಡಿಲಿನ ಬೆಂಕಿ ಸಂಪೂರ್ಣವಾಗಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಸುಟ್ಟುಹಾಕಿದೆ. ಇದು ಎಲೆಕ್ಟ್ರಿಕ್ ವಸ್ತುಗಳು, ವಯರ್ಗಳು, ದಿನಸಿ, ತಂಪು ಪಾನೀಯ ಮಾರಾಟ ಮಾಡುವ ಅಂಗಡಿಯಾಗಿತ್ತು.

ಬುಧವಾರ ಮಧ್ಯಾಹ್ನ ವೀರಭದ್ರಪ್ಪ ಅಂಗಡಿ ಬಾಗಿಲು ಹಾಕಿಕೊಂಡು ಶಿವಮೊಗ್ಗಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಸ್ಥಳಿಯರು ಕರೆಮಾಡಿ ಮನೆಗೆ ಬೇಗ ಬರಲು ತಿಳಿಸಿದ್ದರು. ಸ್ಥಳಕ್ಕೆ ಬಂದು ನೋಡಿದ ವೀರಭದ್ರಪ್ಪನವರಿಗೆ ಇದನ್ನು ನೋಡಿ ಶಾಕ್ ಆಗಿದೆ.
ಬೆಂಕಿಗೆ 12 ಲಕ್ಷ ರೂ. ನ ಮಾಲು ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ವ್ಯಾಪಾರದ ಹಣ ಹಾಗೂ ಹಳೆಯ ಹಣ ಸೇರಿ ಒಟ್ಟು 30 ಸಾವಿರ ರೂ. ಬೆಂಕಿಗೆ ಆಹುತಿಯಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

