ಉಪಯುಕ್ತ ಸುದ್ದಿ

ರಾಜ್ಯದ ಈ ಜಿಲ್ಲೆಗಳಲ್ಲಿ 10 ದಿನಗಳ ಕಾಲ ಭಾರಿ ಮಳೆ

Share It

ಬೆಂಗಳೂರು:

ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಜೋರಾಗಿದೆ. ಆದರೆ ಮಧ್ಯ ಕರ್ನಾಟಕದ ಕೆಲವು ಕಡೆ ಇನ್ನೂ ರೈತರು ಬಿತ್ತನೆ ಕಾರ್ಯ ಮಾಡಲು ಸರಿಯಾಗಿ ಮಳೆ ಬಂದಿಲ್ಲ. ಈಗಾಗಲೇ ರಾಜ್ಯದಲ್ಲಿ ಸುರಿದಿರುವ ಮಳೆಯಿಂದ ಜಲಾಶಯಗಳು ತುಂಬುವ ಹಂತದಲ್ಲಿವೆ. ಈ ಡ್ಯಾಂಗಳು ತುಂಬಿ ಹಂತಕ್ಕೆ ತಲುಪಿರುವ ಪರಿಣಾಮ ಈ ಡ್ಯಾಂಗಳ ನೀರನ್ನು ಕೃಷಿ ಮಾಡುವ ರೈತಾಪಿ ವರ್ಗ ಸಖತ್ ಖುಷಿಯಾಗಿದೆ.

ಈ ಜಿಲ್ಲೆಗಳಲ್ಲಿ ಸುರಿಯಲಿದೆ 10 ದಿನ ಭಾರಿ ಮುಂಗಾರು ಮಳೆ

ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ, ಹಾಸನ, ಬೆಳಗಾವಿ, ತುಮಕೂರು, ಬೆಂಗಳೂರು ನಗರ, ಬಳ್ಳಾರಿ, ವಿಜಯಪುರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ಸುರಿಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Share It

You cannot copy content of this page