10 ತರಗತಿ ಒಳ್ಳೇಯ ಪಲಿತಾಂಶ ತರಲು ಮುಖ್ಯೋಪಾದ್ಯಾಪಕರ ಕಾಯ೯ ಮಹತ್ವ: ಎನ್.ಎಚ್.ಕೋನರಡ್ಡಿ
ನವಲಗುಂದ : 10 ನೇ ತರಗತಿ ಮಕ್ಕಳಿಗೆ ಒಳ್ಳೇಯ ಶಿಕ್ಷಣದ ಜೊತೆಗೆ ಒಳ್ಳೇಯ ಫಲಿತಾಂಶವು ತರವಂತೆ ಈಗಿನಿಂದಲೆ ಮುಖ್ಯೋಪಾದ್ಯಪಕರು ಪ್ರಯತ್ನ ಮಾಡಬೇಕು. ಅಂದಾಗ ಮಾತ್ರ ಕ್ಷೇತ್ರದ ಎಸ್.ಎಸ್.ಎಲ್.ಸಿ ಪಲಿತಾಂಶ ಚನ್ನಾಗಿ ಆಗಲು ಸಾದ್ಯವೆಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಅವರು ಸೋಮವಾರ ಪಟ್ಟಣದ ಶಿಕ್ಷಕ ಭವನದಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಮಾತನಾಡದ್ದು ಮಕ್ಕಳಿಗೆ ವಿದ್ಯಾಬ್ಯಾಸದ ಜೊತೆಗೆ ಉತ್ತಮ ಜೀವನದ ಕನಸನ್ನು ಕಾಣಬೇಕು. 10 ನೇ ತರಗತಿ ಫಲಿತಾಂಶ ಅವರ ಜೀವನವನ್ನು ರೂಪಿಸುತ್ತದೆ. ಮಕ್ಕಳ ಜೀವನವನ್ನು ರೂಪಿಸುವ ಕೆಲಸ ಪ್ರತಿಯೊಬ್ಬ ಶಿಕ್ಷಕರದ್ದು ಆಗಬೇಕೆಂದು ಹೇಳಿದರು.
ಈಗಿನಿಂದಲೇ ಕ್ಷೇತ್ರದ ಮಕ್ಕಳ ಹೆಚ್ಚಿನ ಸಂಖ್ಯೆಯಲ್ಲಿ ತೇಗ೯ಡೆ ಹೊಂದುವುದರ ಜೊತೆಗೆ ಒಳ್ಳೇಯ ಅಂಕವನ್ನು ಪಡೆದುಕೊಳ್ಳುವ ಕಾಯ೯ ಮುಖ್ಯೋಪಾಧ್ಯಪಕರ ಕೈಗೊಳ್ಳಬೇಕು ಹೆಚ್ಚುವರಿ ತರಗತಿಗಳನ್ನು ಹಾಕಿ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ಇದೇ ಸಂದಭ೯ದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಉಪನಿರ್ದೆಶಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡ, ಎ.ಬಿ.ಕೊಪ್ಪದ, ಎಸ್.ಎಫ್.ನೀರಲಗಿ, ಎನ್.ಎಸ್.ತಾಳೀಕೂಟಿಮಠ, ವಿ.ಎಮ್.ಹಿರೇಮಠ, ಎಸ್.ವಾಯ್.ಕಳಸಾಪೂರ, ಎಸ್,ಎಚ್.ಹರಕುಣಿ, ಗಣೇಶ ಹೊಳೆಯಣ್ಣವರ, ತಾಲೂಕಿನ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು.


