ಉಪಯುಕ್ತ ಸುದ್ದಿ

SBI ನಿಂದ ಭರ್ಜರಿ ಉದ್ಯೋಗ ಅವಕಾಶ! 1497, ಪದವಿ ಇದ್ರೆ ಸಾಕು ಅಪ್ಲೇ ಮಾಡಬಹುದು!

Share It

ನಮ್ಮಲ್ಲಿ ವಾಣಿಜ್ಯ ಶಾಸ್ತ ಓದಿನ ವಿದ್ಯಾರ್ಥಿಗಳು ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಾರೆ. ಅಂತಹ ಕನಸನ್ನು ನನಸು ಮಾಡುವ ಕಾಲ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್‌ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಕರೆದಿದ್ದು ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಸಲ್ಲಿಸುವ ವಿಧಾನ , ನೇಮಕಾತಿ, ಅರ್ಹತೆಯ ಬಗ್ಗೆ ನೋಡೋಣ ಬನ್ನಿ.

ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮಾಡಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಒಟ್ಟು 1497 ಹುದ್ದೆಗಳಿಗೆ ಅರ್ಜಿಯನ್ನು ಕರೆದಿದೆ. ಅದರಲ್ಲಿ ಕೆಲವು ಹುದ್ದೆಗಳನ್ನು ಗುತ್ತಿಗೆಯ ಆಧಾರದ ಮೇಲೆ ಮತ್ತು ರೆಗ್ಯುಲರ್ ಬೇಸಿಸ್‌ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಅಧಿಸೂಚಿ ತಿಳಿಸಿದಿದೆ.

ಹುದ್ದೆಗಳ ವಿವರ

  1. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಪ್ರಾಜೆಕ್ಟ್‌ ಮ್ಯಾನೇಜ್ಮೆಂಟ್ ಮತ್ತು ಡೆಲಿವರಿ – 187
  2. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್) – ಇನ್ಫ್ರಾ ಸಪೋರ್ಟ್‌ ಅಂಡ್ ಕ್ಲೌಡ್ ಆಪರೇಷನ್ಸ್‌ – 412
  3. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್‌ ) – ನೆಟ್‌ವರ್ಕ್‌ ಆಪರೇಷನ್ಸ್‌ – 80
  4. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್‌) – ಐಟಿ ಆರ್ಕಿಟೆಕ್ಟ್‌ – 27
  5. ಡೆಪ್ಯೂಟಿ ಮ್ಯಾನೇಜರ್ (ಸಿಸ್ಟಮ್ಸ್)- ಇನ್ಫಾರ್ಮೇಷನ್ಸ್‌ ಸೆಕ್ಯೂರಿಟಿ – 07
  6. ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಮ್) – 784

ವಯೋಮಿತಿ

ಮುಖ್ಯವಾಗಿ ಅಸಿಸ್ಟಂಟ್‌ ಮ್ಯಾನೇಜರ್ ಹುದ್ದೆಗೆ ಸುಮಾರು 21 ರಿಂದ 30 ವರ್ಷ ವಯೋಮಿತಿಯ ಒಳಗೆ ಇರಬೇಕು. ಉಳಿದ ಎಲ್ಲಾ ಹುದ್ದೆಗಳಿಗೆ ಸಮಾನವಾಗಿ 25 ರಿಂದ 30 ವರ್ಷ ವಯೋಮಿತಿ ಹೊಂದಿರಬೇಕು.

ವಿದ್ಯಾರ್ಹತೆ

ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಸಾಫ್ಟ್‌ವೇರ್ ಇಂಜಿನಿಯರಿಂಗ್ ಮತ್ತು ಪದವಿಯನ್ನು ಪಡೆದಿರಬೇಕು. ಇನ್ನು ಎಂಟೆಕ್,ಎಂಸಿಎ, ಎಂಎಸ್ಸಿ ಪದವಿಯನ್ನು ಪಡೆದಿರಬೇಕು ಎಂದು ತಿಳಿಸಿದೆ.

ಅರ್ಜಿಯ ಸಲ್ಲಿಕೆ

ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 4 . ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ ಅಕ್ಟೋಬರ್ 19 ಕೊನೆಯ ದಿನಾಂಕ ವಾಗಿರುತ್ತದೆ.

ಅರ್ಜಿಯ ಶುಲ್ಕ

ಸಾಮಾನ್ಯ ಅಭ್ಯರ್ಥಿಗೆ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ ರೂ. 750 ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಉಳಿದಂತೆ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ. ಶುಲ್ಕವನ್ನು ಡೆಬಿಟ್ ಕ್ರೆಡಿಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು ಎಂದು ಅಧಿಸೂಚಿ ತಿಳಿಸಿದೆ.

ವೇತನ

35,000 – 75,000

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

https://ibpsonline.ibps.in/sbisco2aug24


Share It

You cannot copy content of this page