ಕರ್ನಾಟಕ ಲೋಕ ಸೇವಾ ಆಯೋಗವು ಪಿಡಿಓ 2024 ರ ಹುದ್ದೆಗಳಿಗೆ ಮತ್ತೆ ಅರ್ಜಿಯನ್ನು ಕರೆದಿದೆ. ಈಗಾಗಲೇ ಅಧಿಸೂಚಿಯನ್ನು ಹೊರಡಿಸಿರುವ ಇಲಾಖೆ ಆನ್ ಲೈನ್ ಮೂಲಕ ಅರ್ಜಿಯನ್ನು ಹಾಕುವಂತೆ ತಿಳಿಸಿದೆ. ಏಷ್ಟು ಹುದ್ದೆಗಳು ಹಾಗೂ ಇತರ ವಿವರಗಳನ್ನು ಕೆಳಗಿನಂತೆ ನೋಡೋಣ ಬನ್ನಿ.
ಒಟ್ಟು ಹುದ್ದೆಗಳ ಸಂಖ್ಯೆ :- 247 . ಆ ಪೈಕಿ (150 ಸಾಮಾನ್ಯ ಪ್ರದೇಶ ಹಾಗೂ 97 ಕರ್ನಾಟಕ ಹೈದರಬಾದ್ ಪ್ರದೇಶ)
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ 18 -09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-10-2024
ವಯೋಮಿತಿ
ಕನಿಷ್ಠ 18 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗಕ್ಕೆ ಗರಿಷ್ಠ 38 ವರ್ಷಗಳು. 2A,2B,3A,3B ವರ್ಗದವರಿಗೆ 41 ವರ್ಷ. SC,ST, ಹಾಗೂ ಪ್ರವರ್ಗ 1 43 ವರ್ಷ.
ಅರ್ಹತೆ
ಯಾವುದೇ ವಿವಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.
ಅರ್ಜಿಯ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 600. ರೂ
ಇತರೆ ಹಿಂದುಳಿದ ವರ್ಗಕ್ಕೆ 300. ರೂ
ಮಾಜಿ ಸೈನಿಕ 50 ರೂ.
ಪರಿಶಿಷ್ಟ ಜಾತಿ , ಪಂಗಡ ಪ್ರವರ್ಗ 1 – ಯಾವುದೇ ಅರ್ಜಿ ಶುಲ್ಕವಿಲ್ಲ.
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

