ಅಮೇಥಿ: ಆನ್ ಲೈನ್ ಲಾಟರಿಯಲ್ಲಿ 3.5 ಲಕ್ಷ ಗೆದ್ದ ಖುಷಿಯಲ್ಲಿದ್ದ ಟೀ ಮಾರಾಟಗಾರನೊಬ್ಬ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ದ ಅಮೇಥಿಯಲ್ಲಿ ನಡೆದಿದೆ.
ಆನ್‌ಲೈನ್ ನಲ್ಲಿ ಗೆದ್ದ ಲಾಟರಿ ಹಣ ಪಡೆಯಲು 1.6 ಲಕ್ಷ TDS ಹಣ ಒದಗಿಸುವ ನೆಪದಲ್ಲಿ ರಾಕೇಶ್ ಎಂಬ ಟೀ ಮಾರಾಟಗಾರನ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಮೊಬೈಲ್ ಫೋನ್ ಪಡೆದಿದ್ದರು. ಆತ ಇದೆಲ್ಲವನ್ನೂ ವಾಪಸ್ ಕೇಳಿದಾಗ ಆತನನ್ನು ಬೆದರಿಸಿ, ಇದೆಲ್ಲ ವಾಪಸ್ ಬೇಕಾದರೆ 1 ಲಕ್ಷ ಹಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಹಣ ನೀಡದಿದ್ದರೆ ಮೋಸದಿಂದ ಸಾಲ ಪಡೆದಿರುವ ಪ್ರಕರಣ ದಾಖಲು ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ. ಜತೆಗೆ ಕೇಸ್ ನೆಪದಲ್ಲಿ ನಿನ್ನ ಕುಟುಂಭಕ್ಕೆ ತೊಂದರೆ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಹೆದರಿದ ರಾಕೇಶ್ ತನ್ನ ಮನೆಗೆ ಬಂದು ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ರಾಕೇಶ್ ತಾಯಿ ಶಾಂತದೇವಿ ಸ್ಥಳೀಯರೇ ಆದ ಅನುರಾಗ್ ಜೈಸ್ವಾಲ್, ತೂಫಾನ್ ಸಿಂಗ್, ವಿಶಾಲ್ ಸಿಂಗ್ ಮತ್ತು ಹನ್ಸರಾಜ್ ಮೌರ್ಯ ಎಂಬುವವರ ಮೇಲೆ ದೂರು ನೀಡಿದ್ದಾರೆ. ತಮ್ಮ ಮಗನಿಗೆ ಬೆದರಿಸಿ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ಕುರಿತುಮಾತನಾಡಿರುವ ಅಮೇಥಿ ಎಸ್ ಪಿ ಅನೂಪ್ ಸಿಂಗ್, ಆರೋಪಿಗಳು ಯುವಕನಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿ ಕೆಲ ದಾಖಲೆಗಳನ್ನು ಪಡೆದಿದ್ದಾರೆ. ಇದೆಲ್ಲ ವಾಪಸ್ ಕೇಳಿದಾಗ ಒಂದು ಲಕ್ಷ ರು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಕೊಡದಿದ್ದರೆ, ಆತನ ವಿರುದ್ಧ ದೊಡ್ಡಮಟ್ಟದ ಸಾಲ ಪಡೆದಿರುವ ಆರೋಪ ಹೊರಿಸುವ ಬೆದರಿಕೆ ಹಾಕಿದ್ದಾರೆ.ಇದಕ್ಕೆ ಹೆದರಿದ ರಾಕೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ರಾಕೇಶ್ ತನ್ನ ತಾಯಿಗೆ ಒಬ್ಬನೇ ಮಗನಾಗಿದ್ದು, ತನ್ನ ಟೀ ಅಂಗಡಿಯಿಂದ ಕುಟುಂಬ ಸಲಹುತ್ತಿದ್ದ. ಆತನ ತಂದೆ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಆತನ ಸಹೋದರನೂ ಕೂಡ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದು, ಈತನೇ ಕುಟುಂಬದ ಆಧಾರವಾಗಿದ್ದ ಎನಗನಲಾಗಿದೆ.