ಬೆಂಗಳೂರು: ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಗೆ ಹೈಕೋರ್ಟ್ ಅನುಮತಿ ನೀಡುತ್ತಾ ಅಥವಾ ರಾಜ್ಯಪಾಲರ ನಿರ್ಣಯವನ್ನು ರದ್ದು ಮಾಡುತ್ತಾ ಎಂಬ ಪ್ರಶ್ನೆಗೆ ಮಧ್ಯಾಹ್ನ ಉತ್ತರ ಸಿಗಲಿದೆ.
ಇಂದು ಮಧ್ಯಾಹ್ನ 2.30 ಕ್ಕೆ ಸಿಎಂ ಪರ ಪ್ರಾಸಿಕ್ಯೂಷನ್ ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ ನಡೆಯಲಿದ್ದು, ಸಿಎಂ ರಾಜಕೀಯ ಭವಿಷ್ಯ ಇಂದಿನ ತೀರ್ಪಿನ ಆಧಾರದಲ್ಲಿ ನಿರ್ಧಾರವಾಗಲಿದೆ.
ಸಿಎಂ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡನೆ ಮಾಡಲಿದ್ದಾರೆ. ರಾಜ್ಯಪಾಲರ ಪರವಾಗಿ ಕೇಂದ್ರ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಲಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ನಿರ್ಣಯವನ್ನು ಈಗಾಗಲೇ ಕಾನೂನಾತ್ಮಕವಾಗಿ ಎದುರಿಸಲು ಕೋರ್ಟ್ ಮೊರೆ ಹೋಗಿದ್ದಾರೆ. ರಾಜಕೀಯವಾಗಿ ಇದು ಬಿಜೆಪಿ ಕುತಂತ್ರ ಎಂದು ಹೋರಾಟಗಳು ನಡೆಯುತ್ತಿವೆ. ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಲಾಗುತ್ತಿದೆ.
ಈ ನಡುವೆ ಇಂದು ಹೈಕೋರ್ಟ್ ನೀಡುವ ತೀರ್ಪು ಸಿದ್ದರಾಮಯ್ಯ ಅವರ ಭವಿಷ್ಯ ಬದಲಿಸಲಿದೆ ಡಂಬ ಮಾತುಗಳು ಕೇಳಿಬಂದಿವೆ. ಹೈಕೋರ್ಟ್ ತನಿಖೆಗೆ ಅಸ್ತು ಎಂದರೆ, ಸ್ವಪಕ್ಷದಲ್ಲೇ ಸಿದ್ದರಾಮಯ್ಯ ಮುಂದುವರಿಕೆಗೆ ವಿರೋಧ ವ್ಯಕ್ತವಾಗಬಹುದು ಎಂಬ ಮಾತುಗಳು ಕೇಳಿಬಂದಿವೆ.