ಲಕ್ನೋ; ನೇಪಾಳದಲ್ಲಿ ನಡೆದಿರುವ ಬಸ್ ದುರಂತದ ಸಂತ್ರಸ್ತರ ಪೈಕಿ 25 ಭಾರತೀಯ ಪ್ರವಾಸಿಗರ ಮೃತದೇಹವನ್ನು ಭಾರತೀಯ ವಾಯುಸೇನೆಯ ವಿಮಾನದಲ್ಲಿ ಏರ್ ಲಿಫ್ಟ್ ಮಾಡಲಾಗಿದೆ.
ನೇಪಾಳದ ಚಿತ್ವಾನ್ ಜಿಲ್ಲೆಯ ಭಾರತ್ ಪುರ ವಾಯುನೆಲೆಯಿಂದ ಮಹಾರಾಷ್ಟ್ರದ ಜಲ್ಗಾನ್ ವಾಯುನೆಲೆಗೆ ಸಂತ್ರಸ್ತರನ್ನು ಶನಿವಾರ ರಾತ್ರಿ ವೇಳೆಗೆ ತರಲಾಗುತ್ತದೆ ಎಂದು ಹೇಳಲಾಗಿದೆ.
ಈ ನಡುವೆ ಘಟನೆಯಲ್ಲಿ ಸಾವನ್ನಪ್ಪಿರುವ ಚಾಲಕ ಮುರ್ತಜಾ ಖಾನ್ ಮತ್ತು ಕಂಡಕ್ಟರ್ ರಾಮ್ಜೀತ್ ಆಲಿಯಾಸ್ ಮುನ್ನಾ ಎಂಬುವವರ ಮೃತದೇಹ ಗಳನ್ನು ರಸ್ತೆ ಮೂಲಕ ಉತ್ತರಪ್ರದೇಶದ ಗೋರಖ್ ಪುರಕ್ಕೆ ರಸ್ತೆ ಮೂಲಕ ರವಾನೆ ಮಾಡಲಾಗಿದೆ.
ಯಾವುದೇ ಗಾಯಗಳಿಲ್ಲದೆ ಪಾರಾಗಿರುವ 51 ಮಂದಿ ಪ್ರವಾಸಿಗರನ್ನು ರಸ್ತೆ ಮೂಲಕವೇ ಗೋರಖ್ ಪುರದವರೆಗೆ ರಸ್ತೆ ಮಾರ್ಗದಲ್ಲಿ ಕರೆತಂದಿದ್ದು, ಅಲ್ಲಿಂದ ಮಹಾರಾಷ್ಟ್ರಗೆ ಕಳಿಸಿಕೊಡುವ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 16 ಗಾಯಾಳುಗಳಿಗೆ ಕಠ್ಮಂಡುವಿನ ತ್ರಿಭುವನ್ ಮೆಡಿಕಲ್ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ನೇಪಾಳದ ಭಾರತೀಯ ಧೂತವಾಸ ಕಚೇರಿ ದೃಢಪಡಿಸಿದೆ.
ಏನಿದು ಘಟನೆ?: ನೇಪಾಳದ ಪೋಖಾರಾ ಪ್ರವಾಸಿ ರೆಸಾರ್ಟ್ನಿಂದ ರಾಜಧಾನಿ ಕಠ್ಮಂಡುವಿನ ಕಡೆ ಬರುತ್ತಿದ್ದಾಗ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಆಯತಪ್ಪಿ ಶುಕ್ರವಾರ ಬಸ್ ಉರುಳಿಬಿದ್ದಿತ್ತು. ಘಟನೆಯಲ್ಲಿ 27 ಮೃತಪಟ್ಟಿದ್ದರು.16 ಜನ ಗಂಭೀರವಾಗಿ ಗಾಯಗೊಂಡಿದ್ದರು.