ವಿಜಯಪುರ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಆರಂಭವಾಗುತ್ತಿರುವ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮ ನಾಳೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆಯಲಿದೆ.
ಈ ಸಂಬAಧ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದು, ಬ್ರಿಗೇಡ್ ಯಾವುದೇ ರಾಜಕೀಯ ಸಂಸ್ಥೆಯಲ್ಲ. ಬ್ರಿಗೇಡ್ಗೆ ಯಾವ ಪಕ್ಷದ ರಾಜಕೀಯ ನಾಯಕರು ಬಂದರೂ ನಾನು ಸ್ವಾಗತಿಸುತ್ತೇನೆ. ಬ್ರಿಗೇಡ್ಗೂ ರಾಜಕೀಯಕ್ಕೂ ಸಂಬAಧವಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ೫೦ ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ೧೦೦೮ ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ನಡೆಯಲಿದೆ. ೧೦೦೮ ಸಾಧುಸಂತರ ಪಾದಪೂಜೆ ನೆರವೇರಿಸುವ ಮೂಲಕ ಬ್ರಿಗೇಡ್ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು.