ಮೀರತ್: ಮೊರಾದಾಬಾದ್‌ನಲ್ಲಿ ಮಂಗಳವಾರ ರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ 16 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಹಮ್ಮದ್ ರಶೀದ್ (30) ಎಂದು ಗುರುತಿಸಲಾಗಿದೆ. ಕಾರಿನ ಡ್ಯಾಶ್‌ಬೋರ್ಡ್ನಲ್ಲಿ ಇಟ್ಟಿದ್ದ ಗುರುತಿನ ಚೀಟಿಯನ್ನು ಸಂತ್ರಸ್ತೆ ಗುರುತಿಸುವ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸತ್ಯಾಚಾರದ ನಂತರ ಬದುಕುಳಿದ ಬಾಲಕಿ ತನ್ನ ಕುಟುಂಬಕ್ಕೆ ಘಟನೆಯ ವಿವರ ತಿಳಿಸಿದ್ದು, ನಂತರ ಶುಕ್ರವಾರ ಸಂಜೆ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ಸಂಬAಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬAಧ ಮಾತನಾಡಿರುವ ಮೊರಾದಾಬಾದ್ (ಗ್ರಾಮೀಣ) ಎಸ್‌ಪಿ ಕುನ್ವರ್ ಆಕಾಶ್ ಸಿಂಗ್ ಮಾತನಾಡಿ, ” ಟಾಕ್ಸಿ ಡ್ರೆöÊವರ್ ರಶೀದ್ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.ಸಂತ್ರಸ್ತೆಯು ವಾಹನದಲ್ಲಿ ಗುರುತಿನ ಚೀಟಿ ಗುರುತಿಸಿದ್ದು, ಅದರಲ್ಲಿ ರಶೀದ್ ಅವರ ಹೆಸರು ಮತ್ತು ವಿಳಾಸವಿತ್ತು. ಇದು ಬಂಧನಕ್ಕೆ ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಬಾಲಕಿಯ ತಂದೆ ಮತ್ತು ಪತ್ನಿ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಾಲಕಿ ಕಸ ಎಸೆಯಲು ಮುಂದಾದಾಗ ಒಂದು ಎಸ್‌ಯುವಿ ಕಾರು ತನ್ನ ಬಳಿ ನಿಂತಿತು. ಆಗ ಆರೋಪಿ ರಶೀದ್ ಅವಳನ್ನು ಒಳಗೆ ಎಳೆದುಕೊಂಡು ಹಲ್ಲೆ ನಡೆಸಿ, ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಎರಡು ಗಂಟೆಗಳ ನಂತರ ಗ್ರಾಮದ ಹೊರಗಿನ ಸ್ಮಶಾನದ ಬಳಿ ತನ್ನನ್ನು ಬಿಟ್ಟುಹೋಗುವ ಮೊದಲು ಆರೋಪಿ ಅತ್ಯಾಚಾರದ ವೀಡಿಯೊ ಕೂಡ ಮಾಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕಾಗಿ ಆರೋಪಿಯ ಕಾರು ಮತ್ತು ಮೊಬೈಲ್ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.