ಬೆಂಗಳೂರು: ಕೋರ್ ಕಮಿಟಿಯಲ್ಲಿ ಆದ ಗೊಂದಲದ ನಂತರ ಬಿಜೆಪಿ ನಾಯಕರ ಮತ್ತೊಂದು ಮಹತ್ವದ ಸಭೆ ಡಿ.ವಿ.ಸದಾನಂದ ಗೌಡ ನಿವಾಸದಲ್ಲಿ ನಡೆದಿದೆ.
ಸಭೆಯಲ್ಲಿ ನಾಯಕರು ನೆನ್ನೆಯ ಸಭೆಯಲ್ಲಾದ ಯಡವಟ್ಟುಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಶ್ರೀರಾಮುಲು ಅವರ ಬಗ್ಗೆ ಉಸ್ತುವಾರಿ ರಾಧಾಮೋಹನ್ ದಾಸ್ ಆಡಿದ ಮಾತುಗಳು ಕೆಲ ನಾಯಕರನ್ನು ಕೆರಳಿಸಿವೆ.
ಸಭೆಯಲ್ಲಿ ಆರ್.ಅಶೋಕ್, ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರು ಭಾಗವಹಿಸಿದ್ದರು.