ಬೆಂಗಳೂರು: ರಾಮಾಚಾರಿ ಧಾರವಾಹಿ ನಿರ್ದೇಶಕರ ವಿರುದ್ಧ ಇನ್ಟಾಗ್ರಾಂನಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಇದರ ವಿರುದ್ಧ ನಿರ್ದೇಶಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕರ‍್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ರಾಮಾಚಾರಿ ಸೇರಿ 16 ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ರಾಮ್ ಜೀ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿತ್ತು.
ಇಸ್ಟಾಗ್ರಾಂ ಖಾತೆಯಲ್ಲಿ ಜ.24 ರಂದು ಅಕೌಂಟ್ ಓಪನ್ ಮಾಡಿದ್ದು, ರಾಮ್ ಜೀ ಧಾರವಾಹಿಗೆ ಬರುವ ಹೆಣ್ಣುಮಕ್ಕಳ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ಪೋಸ್ಟ್ ಮಾಡಲಾಗಿತ್ತು. ಇದರಿಂದ ತಮ್ಮ ಘಟನೆಗೆ ದಕ್ಕೆಯಾಗಿದೆ. ಬೆಳವಣಿಗೆ ಸಹಿಸದೆ ಕಿಡಿಗೇಡಿಗಳು ಇಂತಹ ಪೋಸ್ಟ್ ಮಾಡುತ್ತಿದ್ದಾರೆ ಎಂದು ನಿರ್ದೇಶಕ ರಾಮ್ ಜೀ ದೂರಿದ್ದಾರೆ.
ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಪೋಲೀಸ್ ಠಾಣೆಗೆ ದೂರು ನೀಡಿರುವ ನಿದೇರ್ಶಕ ರಾಮ್ ಜೀ, ಆರೋಪಿಗಳ ವಿರುದ್ಧ ಸಊಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.