ಹೆಣ್ಣು ಕೊಡಿಸುವ ನೆಪದಲ್ಲಿ ವಂಚನೆ:ಆರೋಪಿಗಳ ಪತ್ತೆಗೆ ಮದುಮಗನಾದ ಪೊಲೀಸ್ !

Share It

ಹೊಸದಿಲ್ಲಿ: ನಕಲಿ ಮದುವೆಗಳನ್ನು ಮಾಡಿಸಿ, ನಂತರ ವಂಚನೆ, ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಮಧುಮಗನಂತೆ ನಟಿಸಿ, ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಹಂಗೀರ್ ಪುರ್ ನಲ್ಲಿ 2019 ರಲ್ಲಿ ಮಹಿಳೆಯೊಬ್ಬರು ನೀಡಿದ್ದ ದೂರಿನ ಅನ್ವಯ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಟುಕಾಟ ನಡೆಸಿದ್ದರು. ಆದರೆ, ಅಂತಿಮವಾಗಿ ಮಧುವೆ ವರನ ವೇಷತೊಟ್ಟು ಹೆಣ್ಣು ನೋಡುವ ಶಾಸ್ತçದ ಪ್ರಕಾರ ಹೆಡ್‌ಕಾನ್ಸ್ಟೇಬಲ್ ಒಬ್ಬರನ್ನು ಮುಂದೆ ಬಿಟ್ಟು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

2019ರಲ್ಲಿ ಇದೇ ರೀತಿ ಅನೇಕರಿಗೆ ಮದುವೆ ಮಾಡಿಸಿದ್ದ ಆರೋಪಿಗಳು ಸಂತ್ರಸ್ತರಿAದ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ನ್ಯಾಯಾಲಯ ಅವರನ್ನು ಆರೋಪಿಗಳೆಂದು ಪರಿಗಣಿಸಿತ್ತು. ಆದರೆ, ಆರೋಪಿಗಳು ತಲೆಮರೆಸಿಕೊಂಡಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು, ವಧು ಹುಡುಕುವ ನೆಪದಲ್ಲಿ ಅವರನ್ನು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಡ್ ಕಾನ್ಸ್ಟೇಬಲ್ ಸುರೇಂದರ್ ಎಂಬುವವರು ವರನಂತೆ ನಟಿಸಿ, ಮದುವೆ ಪ್ರಸ್ತಾಪ ಹೊತ್ತು ಆರೋಪಿಗಳಾದ ದಿನ್ ಮಹಮದ್ ಮಂಡಲ್ ಮತ್ತು ಆತನ ಪತ್ನಿಯನ್ನು ಸಂಪರ್ಕಿಸಿದ್ದರು. ಮಧ್ಯವರ್ತಿಗಳಂತೆ ನಡೆಸಿದ್ದ ಇವರಿಬ್ಬರು, ವಧುವಿನ ಸೋದರ ಮಾವ ಮತ್ತು ಸಹೋದರಿ ಎಂದು ರಾಹುಲ್ ಮತ್ತು ಆತನ ಪತ್ನಿಯನ್ನು ಪರಿಚಯಿಸಿಕೊಂಡಿದ್ದರು.

ವಧು ನೋಡುವ ನೆಪದಲ್ಲಿ ಆಗಮಿಸಿದ ಪೊಲೀಸರು, ಮಧ್ಯವರ್ತಿಗಳು ಸೇರಿ ಮೂವರನ್ನು ಬಂಧಿಸಿದ್ದಾರೆ. ಆದರೆ, ರಾಹುಲ್ ಮತ್ತು ಆತನ ಪತ್ನಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ.

ಅವಿವಾಹಿತ ಯುವಕರನ್ನು ಗುರಿಯಾಗಿಸಿಕೊಂಡು, ಇಂತಹ ದಂಧೆ ನಡೆಸುತ್ತಿದ್ದ ಗುಂಪು ನಂತರ ಅವರಿಂದ ಹಣ, ವಡವೆಗಳನ್ನು ಕತ್ತುಕೊಂಡು ಪರಾರಿಯಾಗುತ್ತಿತ್ತು. ಕೆಲವು ಮಹಿಳೆಯರನ್ನು ವಧುವಿನ ಸೋಗಿನಲ್ಲಿ ಬಳಕೆ ಮಾಡುತ್ತಿದ್ದರು. ಅವರ ವಿರುದ್ಧ ಇಂತಹ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You May Have Missed

You cannot copy content of this page