ಬೆಂಗಳೂರು: ಮೈಕೋ ಫೈನಾನ್ಸ್ ಹಾವಳಿಗೆ ಮೂಗುದಾರ ಹಾಕುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಗೀಕಾರ ನೀಡಿದ್ದು, ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಹಾವಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ.
ಈಗಾಗಲೇ ಪೊಲೀಸರು ಬಡ್ಡಿ ದಂಧೆಕೋರರ ಬೆಂಡೆತ್ತುವ ಕೆಲಸ ಮಾಡುತ್ತಿದ್ದಾರಾದರೂ, ಪೊಲೀಸರ ಕ್ರಮಕ್ಕೆ ಕಾನೂನಿನ ಬಲ ಸಿಕ್ಕಂತಾಗಿದೆ. ರಾಜ್ಯಾದ್ಯಂತ ಅನೇಕನ್ನು ಬಲಿ ಪಡೆದುಕೊಂಡಿದ್ದ ಮೈಕ್ರೋ ಫೈನಾನ್ಸ್ಗಳ ಹಾವಳಿ ತಡೆಗೆ ಸರಕಾರ ಸುಗ್ರೀವಾಜ್ಞೆ ರೆಡಿಮಾಡಿದೆ.
ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಕೆಲವು ಕ್ಲಾರಿಫಿಕೇಷನ್ ಕೇಳುವ ಮೂಲಕ ವಾಪಸ್ ಮಾಡಿದ್ದರು. ಇದೀಗ ಸರಕಾರ ಅದಕ್ಕೆ ಸರಿಯಾದ ವ್ಯಾಖ್ಯಾನಗಳನ್ನು ನೀಡಿದ್ದು, ಇದೀಗ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಬಗ್ಗೆ ಚರ್ಚೆಯಾಗಿ ಅಂತಿಮವಾಗಿ ಜಾರಿಗೆ ಬರಲಿದೆ.
ಇದೀಗ ಫೆ.೧೭ ರಂದು ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ, ಸಿಎಂ ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದು, ಫೆ.೨೦ರಂದು ಬೆಂಗಳೂರಿನಲ್ಲಿಯೇ ನಡೆಯಲಿದೆ.
ಕೆಲವು ಸಲಹೆಗಳನ್ನು ನೀಡಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಸಲಹೆಗಳ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಸೂಚಿಸಲಾಗಿದೆ.