ಕೊನೆಯ ಶ್ರಾವಣ ಪೂಜೆಯಲ್ಲಿ ಭಾಗವಹಿಸಿದ ಅರಕಲಗೂಡು ಶಾಸಕ ಎ.ಮಂಜು
ಅರಕಲಗೂಡು: ಶ್ರಾವಣ ಮಾಸದ ಕಡೆಯ ಶನಿವಾರದಂದು ನಡೆದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಅರಕಲಗೂಡು ಶಾಸಕ ಎ.ಮಂಜು ಭಾಗವಹಿಸಿದ್ದರು.
ತಾಲೂಕಿನ ದೊಡ್ಡಕಾಡನೂರು ದಾಖಲೆಯ ಗುಳ್ಳದಪುರ ಗ್ರಾಮದ ಶ್ರೀ ವೆಂಕಟರಮಣ ಸ್ವಾಮಿ ಬೆಟ್ಟದಲ್ಲಿ ನಡೆದ ಕಡೆಯ ಶ್ರಾವಣ ಪೂಜೆಯಲ್ಲಿ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ವೆಂಕಟರಣಮ ಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ಕೊನೆಯ ಶ್ರಾವಣ ಶನಿವಾರ ಗ್ರಾಮದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಮೆರವಣಿಗೆ ನಡೆಸಲಾಗುತ್ತದೆ. ಈ ವರ್ಷದ ಶ್ರಾವಣ ಕಾರ್ಯಕ್ರಮಕ್ಕೆ ಅರಕಲಗೂಡು ಶಾಸಕ ಎ.ಮಂಜು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಯತಿರಾಜ್ ಗುಡ್ಡದಹಳ್ಳಿ ಹಾಗೂ ಕುಟುಂಬಸ್ಥರು, ಗುಡ್ಡದಹಳ್ಳಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.