ಕ್ರೀಡೆ ಸುದ್ದಿ

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ

Share It

ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ದಲ್ಲಿ ಭಾರತವು 280 ರನ್ ಗಳಿಂದ ಗೆದ್ದು ಬೀಗಿದೆ. ಇನ್ನು ಎರಡನೇ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ.

ಈಗಾಗಲೇ ದೊರೆತಿರುವ ಹವಾಮಾನ ವರದಿಗಳ ಪ್ರಕಾರ ಕಾನ್ಪುರದಲ್ಲಿ ನಡೆಯಬೇಕಿದ್ದ ಎರಡನೇ ಟೆಸ್ಟ್ ಪಂದ್ಯಕ್ಕೆ ಮಳೆ ಅದ್ದಿಯುಂಟು ಮಾಡುವ ಆತಂಕ ಎದ್ದು ಕಾಣುತ್ತಿದೆ. ಹೌದು ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರದಂದು ಕಾನ್ಪುರದಲ್ಲಿ ಶೇಕಡಾ 83% ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ ಮಾರನೆಯ ದಿನವಾದ ಭಾನುವಾರವೂ ಸಹ ಇದೇ ಮಳೆ ಮುಂದುವರೆಯಲಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.

ಬಾಂಗ್ಲಾದೇಶದ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳಲ್ಲೂ ಗೆದ್ದು ಟೀಮ್ ಇಂಡಿಯಾ ಸರಣಿಯನ್ನು ವೈಟ್ ವಾಶ್ ಮಾಡುವ ನಿರೀಕ್ಷೆಯಲ್ಲಿತ್ತು. ಆದರೆ ಈ ನಿರೀಕ್ಷೆಗೆ ಮಳೆರಾಯ ಅಡ್ಡಿಯುಂಟು ಮಾಡುವ ನಿರೀಕ್ಷೆಯಲ್ಲಿದ್ದಾನೆ.

ಎರಡು ಪಂದ್ಯಗಳನ್ನು ಗೆದ್ದರೆ ಟೀಮ್ ಇಂಡಿಯಾ ಡಬ್ಲ್ಯೂ ಟಿಸಿ ಪಾಯಿಂಟ್ಸ್ ಟೇಬಲ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸುಲಭವಾಗುತ್ತದೆ. ಆದರೆ ಈ ಮಳೆರಾಯ ಈ ಭಾರತದ ಕನಸಿಗೆ ಭಂಗ ತರಲಿದ್ದಾನೆ ಎನ್ನಲಾಗುತ್ತಿದೆ.

ಈ ಪಂದ್ಯ ರದ್ದಾದರೆ ಟೀಮ್ ಇಂಡಿಯಾ ಡಬ್ಲ್ಯೂಟಿಸಿ ಫೈನಲ್ ನಲ್ಲಿ ಆಡಲು ಮುಂಬರುವ 8 ಪಂದ್ಯಗಳಲ್ಲಿ 6 ಗೆಲ್ಲಬೇಕಾಗುತ್ತದೆ. ಈ ಮೂಲಕ ಟೀಮ್ ಇಂಡಿಯಾಗೆ ದೊಡ್ಡ ಪೆಟ್ಟು ಬೀಳಲಿದೆ.


Share It

You cannot copy content of this page