ಗೋಸುಂಬೆಯಂತೆ ಬಣ್ಣ ಬದಲಿಸುವ ಕೆರೆಯ ಬಗ್ಗೆ ನಿಮ್ಗೆ ಗೊತ್ತಾ?
ನಮಗೆಲ್ಲ ಗೋಸುಂಬೆ ಗೊತ್ತೇ ಇದೆ ಅಲ್ಲವೇ. ಅದರ ವಿಶೇಷತೆ ಆದ್ರೆ ತನಗೆ ಬೇಕಾದಾಗ ಬಣ್ಣವನ್ನು ಬದಲಾಯಿಸುತ್ತದೆ. ಗೋಸುಂಬೆಯಂತೆ ಬಣ್ಣವನ್ನು ಬದಲಾಯಿಸುವ ಒಂದು ಕೆರೆ ಇದೆ ಆದ್ರೆ ನೀವು ನಂಬ್ತೀರಾ! ಹೌದು ನಮ್ಮ ದೇಶದಲ್ಲೇ ಇಂತಹ ಕೆರೆ ಇದೆ ಎಂಬುದನ್ನು ನೀವು ನಂಬಲೇ ಬೇಕು. ಆಗಿದ್ರೆ ಬನ್ನಿ ಈ ಬಗ್ಗೆ ತಿಳಿಯೋಣ.
ನಿಗೂಢ ಕೆರೆ ಎಂದೇ ಪ್ರಸಿದ್ಧಿ ಪಡೆದಿರುವ ಈ ಕೆರೆಯು ಉತ್ತರಾಖಂಡದ ನೈನಿತಾಲ್ ನಗರದಲ್ಲಿದೆ. ಖುರ್ಪತಾಲ್ ಕೆರೆಯು ವರ್ಷ ಪೂರ್ತಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಕೆಂಪು, ಹಸಿರು, ಕಪ್ಪು ಬಣ್ಣಕ್ಕೆ ನೀರು ಬದಲಾಗುತ್ತದೆ. ಅಷ್ಟೇ ಅಲ್ಲದೇ ಕೆಲ ವೇಳೆ ನೀರು ಬಿಸಿಯಾಗುವುದರಿಂದ ಸುತ್ತಮುತ್ತಲಿನ ಜನರು ಈ ಕೆರೆಯನ್ನು ಬಿಸಿನೀರಿನ ಕೆರೆ ಎಂತಲೂ ಕರೆಯುತ್ತಾರೆ.
ಈ ಕೆರೆಯು ಝಿಲ್ ಕುದುರೆಯ ಆಕಾರವನ್ನು ಹೊಂದಿದ್ದು ಸಮುದ್ರ ಮಟ್ಟದಿಂದ ಸುಮಾರು 1635 ಮೀಟರ್ ಎತ್ತರದಲ್ಲಿದೆ. ” ಈ ಕೆರೆಯಲ್ಲಿ 40 ಕ್ಕೂ ಹೆಚ್ಚು ಬಗೆಯ ಪಾಚಿಗಳು ಇರುವುದರಿಂದ ಈ ಕೆರೆಯ ಮೇಲೆ ಸೂರ್ಯನ ಬೆಳಕು ಬಿದ್ದಾಗ ಹಾಗೂ ಪಾಚಿಗಳು ಬೀಜವನ್ನು ಉತ್ಪಾದಿಸುವ ಸಂದರ್ಭದಲ್ಲಿ ಈ ರೀತಿಯಾಗಿ ಬಣ್ಣ ಬದಲಾವಣೆಯಾಗುತ್ತದೆ ಎಂದು ಡಿಎಸ್ಬಿ ನೈನಿತಾಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಲಲಿತ್ ತಿವಾರಿ ಹೇಳುತ್ತಾರೆ”.
ಸ್ಥಳೀಯರ ಪ್ರಕಾರ ಈ ಕೆರೆಯು ವರ್ಷ ಪೂರ್ತಿ ತನ್ನ ಬಣ್ಣವನ್ನು ಬದಲಾಯಿಸುತ್ತದೆ. ಈ ಕೆರೆಯ ಪ್ರತಿ ಬಣ್ಣದಲ್ಲಿ ಒಂದೊಂದು ಅರ್ಥವಿದೆ ಎಂದು ಹೇಳುತ್ತಾರೆ. ತಿಳಿ ಕೆಂಪು ಬಣ್ಣವು ಅಪಾಯದ ಸಂಕೇತವಾಗಿದೆ. ಮಾರ್ಚ್ ತಿಂಗಳಲ್ಲಿ ತಿಳಿ ಹಸಿರು ಬಣ್ಣವನ್ನು ಕಾಣಬುದಾಗಿದೆ.
ಇದರ ಜೊತೆಗೆ ಕೆರೆಯ ಸುತ್ತಲೂ ಪೈನ್ ಮರಗಳು ಇವೆ. ಇದರ ಹೂ ಗಳು ಕೆರೆಗೆ ಬೀಳುವುದರಿಂದ ಬಣ್ಣ ಬದಲಾಗುತ್ತದೆ. ಮರದ ನೆರಳು ಕೂಡ ಕೆರೆಯ ಮೇಲೆ ಬೀಳುತ್ತದೆ. ಜಿಮ್ ಕಾರ್ಬೆಟ್ ಈ ಕೆರೆಯನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.


