ಅಪರಾಧ ಸುದ್ದಿ

ಅನಧಿಕೃತ ಟುಟೋರಿಯಲ್ ವಿರುದ್ಧ ಕರುನಾಡ ವಿಜಯಸೇನೆ ಪ್ರತಿಭಟನೆ

Share It

ನವಲಗುಂದ : ಶಿಕ್ಷಣ ಇಲಾಖೆಯ ಪರವಾನಿಗೆ ಇಲ್ಲದೇ ಅನಧೀಕೃತ ಟ್ಯೂಟರಿಯಲ್ ನಡೆಸುತ್ತಿರುವ ಪಟ್ಟಣದ ವಿದ್ಯಾಜ್ಯೋತಿ ಟ್ಯೂಟರಿಯಲ್ ಶಾಲೆಯ ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಸೋಮವಾರ ಕರುನಾಡು ವಿಜಯಸೇನೆ ಪದಾಧಿಕಾರಿಗಳು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಲ್ಲೂಕಾ ಅಧ್ಯಕ್ಷ ಅರುಣಕುಮಾರ ಸುಣಗಾರ ಮಾತನಾಡಿ ವಿದ್ಯಾಜ್ಯೋತಿ ಟ್ಯೂಟರಿಯಲ್ ವಿರುದ್ಧ ಕ್ರಮ ಕೈಗೊಳ್ಳಳುವಂತೆ ಧಾರವಾಡ ಉಪನಿರ್ದೇಶಕರಿಗೆ ಒಂದು ವರ್ಷದಿಂದ ದೂರು ಸಲ್ಲಿಸಿದರು ಇದುವರೆಗೂ ಯಾವಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ. ಶಿಕ್ಷಣ ಇಲಾಖೆ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಈ ವಸತಿ ಟ್ಯೂಟರಿಯಲ್ ಅಧಿಕಾರಿಗಳು ಸ್ಥಾನಿಕವಾಗಿ ಖುದ್ದು ಭೇಟಿ ನೀಡಿ, ಟ್ಯೂಟರಿಯಲ್ ಸಂಬಂಧಿಸಿದ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಅನಧೀಕೃತ ಟ್ಯೂಟರಿಯಲ್ ಪರವಾನಿಗೆಯನ್ನು ಈ ತಕ್ಷಣ ಹಿಂಪಡೆದು ಹಣ ದೋಚುತ್ತಿರುವ ಸಂಸ್ಥೆಯ ವಿರುದ್ಧ ಕಟ್ಟುನಿಟ್ಟಾಗಿ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು

ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕುಮಾರ ಲಕ್ಕಮ್ಮನವರ, ಪ್ರಕಾಶ ಗೊಂಧಳೆ, ನಿಂಗಪ್ಪ ಕೆಳಗೇರಿ, ರಮೇಶ ಮಾದರ, ರವಿ ಹುಣಶಿಮರದ, ಶಿವು ಪೂಜಾರ್, ಮುತ್ತು ದೊಡಮನಿ, ಶಿವು ನಾಯ್ಕರ, ಕಾರ್ತಿಕ ಸವದತ್ತಿ, ರವಿ ಗಡ್ಡಿ, ವಿಠ್ಠಲ ಶೇಲ್ಲೆನ್ನವರ, ಪ್ರಜ್ವಲ್ ತೆಲಿ, ಶಿವು ಹೆಬ್ಬಾಳ, ಶರತ್ ಬಸವಂತಕರ ಇತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.


Share It

You cannot copy content of this page