ಕಚೇರಿ ಉದ್ಘಾಟನೆಗೆ ಉಪ್ಪು-ಖಾರ ಹಾಕ್ತಿದ್ದಾರೆ: ವಿ.ಸೋಮಣ್ಣ
ದಾವಣಗೆರೆ: ತಮ್ಮ ಕಚೇರಿ ಉದ್ಘಾಟನೆ ವೇಳೆ ಅತೃಪ್ತರ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಸುಳ್ಳು, ಕಚೇರಿ ಉದ್ಘಾಟನೆಗೆ ನಾನು ಯಾರನ್ನು ಕರೆದಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ಸುಳ್ಳುಸುದ್ದಿಗಳನ್ನೆಲ್ಲ ಹರಿದಾಡಿಸುತ್ತಿದ್ದಾರೆ. ನನ್ನ ಕಚೇರಿಯ ಉದ್ಘಾಟನೆಗೆ ನಾನು ಯಾರನ್ನೂ ಕರೆದಿಲ್ಲ. ನನ್ನ ಸಂಬAಧಿಕರನ್ನು ಕರೆದಿಲ್ಲ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಇದ್ದರೆ ಹೈಕಮಾಂಡ್ ನಾಯಕರು ಬಗೆಹರಿಸುತ್ತಾರೆ. ಅದನ್ನೇ ದೊಡ್ಡದು ಮಾಡುವ ಅವಶ್ಯಕತೆಯಿಲ್ಲ. ಸುಮ್ಮನೆ ದೊಡ್ಡದು ಮಾಡುವುದು ಬೇಡ ಎಂದು ತಿಳಿಸಿದರು.


