ತಣಿಗೆ ಬೈಲು ಆನೆ ತುಳಿತ: ಮೃತ ಮಹಿಳೆ ಕುಟುಂಬಕೆ 15 ಲಕ್ಷ ಪರಿಹಾರ
ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 15 ಲಕ್ಷ ರು. ಚೆಕ್ ವಿತರಣೆ ಮಾಡಲಾಗಿದೆ.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮೃತರ ಕುಟುಂಬಕ್ಕೆ 15 ಲಕ್ಷ ರು.ಗಳ ಚೆಕ್ ವಿತರಣೆ ಮಾಡಿದರು. ಎನ್.ಆರ್. ಪುರ ತಾಲೂಕಿನ ತಣಿಗೆಬೈಲು ಪ್ರದೇಶದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ ನಡೆಸಿದ ಆನೆ, ಕಾರ್ಮಿಕ ಮಹಿಳೆ ವಿನೋದಾ ಎಂಬುವವರನ್ನು ತುಳಿದು ಸಾಯಿಸಿತ್ತು.
55 ವರ್ಷದ ಮಹಿಳೆ ವಿನೋದಾ ವಿಜಯಪುರ ಜಿಲ್ಲೆಯ ಹರಪ್ಪನಹಳ್ಳಿ ಮೂಲದವರಾಗಿದ್ದು, ಅವರ ಕುಟುಂಬ ಕಾಫಿ ತೋಟದಲ್ಲಿ ಕೆಲಸ ಮಾಡುತಿತ್ತು. ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಇದ್ದ ಆನೆಯೊಂದು ಆಕೆಯನ್ನು ತುಳಿದಿತ್ತು.
ತರೀಕರೆ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿರುವ ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


