ಬರೇಲಿ: ಮಧುವೆ ಸಮಾರಂಭದಲ್ಲಿ ಡಿಜೆ ಹಾಡುವ ಬದಲಾಯಿಸುವ ವಿಚಾರಕ್ಕೆ ಶುರುವಾದ ಗಲಾಟೆ ವರನ ಸಹೋದರನಿಗೆ ಗುಂಡಿಕ್ಕಿ ಕೊಲ್ಲುವ ಹಂತಕೆಕ ಬಂದು ತಲುಪಿದೆ.
ಲಖೀಂಪುರ ಖೇರಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರ್ಮುಲ ಆಚರಣೆ ಸಂದರ್ಭದಲ್ಲಿ ವರನ ವರ್ಮಾ ಮೇಲೆ ವಧುವಿನ ಸೋದರ ಸಂಬಂಧಿಯಾದ ಸುಮಿತ್ ಕುಮಾರ್ ಗುಂಡು ಹಾರಿಸಿದ್ದಾನೆ. ಮೊದಲಿಗೆ ಇವರಿಬ್ಬರ ವಿಚಾರಣೆ ಹಾಡು ಹಾಕುವ ವಿಚಾರಕ್ಕೆ ಗಲಾಟೆಯಾಗಿತ್ತು. ಹಿರಿಯರು ಬಗೆಹರಿಸಿದ್ದರು.
ಆದರೆ, ಒಂದು ಗಂಟೆಯ ನಂತರ ವರ್ಮುಲ ಆಚರಣೆ ನಡೆಯುವಾಗ ಸುಮಿತ್ ಮತ್ತು ಇತರೆ ಇಬ್ಬರು,ಅಶೀಶ್ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಆಶಿಶ್ ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಣೆ ಮಾಡಲಾಯಿತು.
ಲಖೀಂಪುರ ನಗರದ ಬೆಹ್ಜಾಮ್ ರಸ್ತೆಯಲ್ಲಿರುವ ಹರಿಕರಣ್ ಮ್ಯಾರೇಜ್ ಲಾನ್‌ನಲ್ಲಿ ನಾನು ನನ್ನ ಸೋದರ ಸಂಬಂಧಿಯ ಮದುವೆಗೆ ಬಂದಿದ್ದು, ನಾವೆಲ್ಲರೂ ಸಂತೋಷದಿAದ ಇದ್ದೆವು. ಬೇರೆ ಹಾಡು ಹಾಕಬೇಕು ಎಂಬ ವಿವಾದ ಗಂಭೀರ ಸ್ವರೂಪ ಪಡೆದುಕೊಂಡಿತು. ಇದಕ್ಕಾಗಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.