ಬೆಂಗಳೂರು : ನಗರದಲ್ಲಿಂದು ಪ್ರತಿಭಟನೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತಾಡಿದ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೀಗೆ ಹೇಳಿದರು:
“ಯಾರೇನೇ ಹೇಳಿದರೂ ಮಾ. 22 ರಂದು ಅಖಿಲ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ, ಅವತ್ತು ರಾಜ್ಯಾದ್ಯಂತ ಬಸ್ಗಳ ಓಡಾಟ ಸ್ಥಗಿತಗೊಳ್ಳಲಿದೆ, ಮತ್ತು ಬಿಎಂಆರ್ಸಿಎಲ್ ಮೆಟ್ರೋ ಪ್ರಯಾಣದ ದರ ಹೆಚ್ಚಿಸಿರುವುದರಿಂದ ರೈಲುಗಳ ಓಡಾಟ ಬಂದ್ ಮಾಡಲಾಗುವುದು ಎಂದು ಪುನರುಚ್ಛರಿಸಿದರು.
ಇದೇ ವೇಳೆ ವರದಿಗಾರರು ಕನ್ನಡ ಪರ ಸಂಘಟನೆಗಳು ಯಾಕೆ ಬಂದ್ ಕರೆ ನೀಡಿವೆ? ಅನ್ನೋ ಪ್ರಶ್ನೆಗೆ ಉತ್ತರಿಸಿದ ವಾಟಾಳ್ ಅವರು ಅದಕ್ಕೆ ಏಳೆಂಟು ಕಾರಣಗಳನ್ನೂ ನೀಡಿ ಸಂಕ್ಷಿಪ್ತವಾಗಿ ವಿವರಿಸಿದರು.