ಕ್ರೀಡೆ ಸುದ್ದಿ

ಭಾರತದ ಸ್ಟಾರ್ ಆಟಗಾರರು ರಣಜಿಗೆ ಎಂಟ್ರಿ

Share It

ನವದೆಹಲಿ : ಭಾರತವು ತವರಿನಲ್ಲಿ ನಡೆದ ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ಆಟಗಾರರು ದೇಶೀಯ ಕ್ರಿಕೆಟ್ ಅನ್ನು ಆಡಬೇಕೆಂದು ಬಿಸಿಸಿಐ ಸೂಚನೆಯನ್ನು ನೀಡಿತು.

ಇದೀಗ ಭಾರತದ ಸ್ಟಾರ್ ಆಟಗಾರರು ದೇಶೀಯ ಆಟವಾಡಲು ಮರಳಿದ್ದಾರೆ. ಅಷ್ಟಕ್ಕು ಈ ನಿರ್ಧಾರ ಮಾಡಿದ ಆಟಗಾರರು ಯಾರು ಎಂಬುದನ್ನ ತಿಳಿಯೋಣ ಬನ್ನಿ.

ಭಾರತದ ಯುವ ಆಟಗಾರ ಯಶಸ್ವಿ ಜೈಸ್ವಲ್ ರಣಜಿಯಲ್ಲಿ ಮುಂಬೈ ತಂಡದ ಪರ ಆಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಂತೆ ತಂಡಕ್ಕೆ ಅಭ್ಯಾಸಕ್ಕೆ ಸೇರಿಕೊಂಡಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್ ಕಂ ಬ್ಯಾಟರ್ ರಿಶಬ್ ಪಂತ್ ಕೂಡ ಡೆಲ್ಲಿ ಪರ ಆಡಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. 

ಭಾರತದ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಮುಂಬೈ ತಂಡದಲ್ಲಿ ಆಡುವ ಸಾಧ್ಯತೆ ಇದೆ ಬುಧವಾರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್ಯದ ಪರ ರಾಹುಲ್ ಆಡಲಿದ್ದಾರೆ ಎಂದು ಮಾಹಿತಿ ಇದ್ದು ಇನ್ನು ಖಚಿತತೆ ಇಲ್ಲ. ರಣಜಿಯ ಪಂದ್ಯಗಳು ಜ.23 ರಿಂದ ಆರಂಭಗೊಳ್ಳಲಿವೆ.


Share It

You cannot copy content of this page