ಹಾಸನ: ಮೈಕ್ರೋ ಫೈನಾನ್ಸ್ ಹಾವಳಿ ರಾಜ್ಯವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಹಾಸನ ಜಿಲ್ಲೆಯಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡ ತಾಲೂಕಿನ ಕೊಣನೂರು ಗ್ರಾಮದ ರೈತ ರವಿ ಆತ್ಮಹತ್ಯೆ ಮಾಡಿಕೊಂಡವರು. ಧರ್ಮಸ್ಥಳ ಸಂಘ, ಟ್ರಾö್ಯಕ್ಟರ್ ಸಾಲ ಸೇರಿದಂತೆ ಅನೇಕ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿದ್ದರು.
ಸಾಲ ತೀರಿಸಲು ಸಾಧ್ಯವಾಗದೆ ಇದ್ದಾಗ ಶುಂಠಿ ಬೆಳೆ ಬೆಳೆದು ಸಾಲ ತೀರಿಸುವ ಪ್ರಯತ್ನ ಮಾಡಿದ್ದರು. ಆದರೆ, ಶುಂಠಿ ಬೆಳೆಯೂ ಕೈಕೊಟ್ಟಿದ್ದರಿಂದ ಮತ್ತಷ್ಟು ಸಾಲ ಹೆಚ್ಚಾಗಿತ್ತು. ಇದರಿಂದ ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.