ಬೆಂಗಳೂರು: ಸಾಲಗಾರರ ಕಾಟಕ್ಕೆ ಬೆದರಿ ಅಡಕೆ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಅಡಿಕೆ ವ್ಯಾಪಾರಿ ದಾದಾಪೀರ್ ತಿಳುವಳ್ಳಿ (೩೨) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾದಾಪೀರ್ ಅಡಿಕೆ ವ್ಯಾಪಾರಿಯಾಗಿದ್ದು, ಲಕ್ಷಾಂತರ ರುಪಾಯಿ ವಹಿವಾಟು ನಡೆಸುತ್ತಿದ್ದ ಎನ್ನಲಾಗಿದೆ.
30 ಲಕ್ಷ ರು,ವರೆಗೆ ದಾದಾಪೀರ್ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಾಟಕ್ಕೆ ಬೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಡಿಕೆ ವ್ಯಾಪಾರ ಮಾಡುತ್ತಿದ್ದಾಗ 30 ಲಕ್ಷ ರುಪಾಯಿಯ ಅಡಿಕೆಯನ್ನು ಬೇರೆಯವರಿಗೆ ಕೊಡಿಸಿದ್ದಎನ್ನಲಾಗಿದೆ. ಅಡಿಕೆ ಖರೀದಿ ಮಾಡಿದವರು ಹಣ ವಾಪಸ್ ನೀಡಿರಲಿಲ್ಲ.
ಸಾಲ ಕೊಟ್ಟವರು ಆತನನ್ನು ಕಾಡಲು ಶುರು ಮಾಡಿದ್ದರು. ಹೀಗಾಗಿ, ಆತ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬAಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.