ನಿರುದ್ಯೋಗಿಗಳಿಗೆ ಇದು ಗುಡ್ ನ್ಯೂಸ್: ಪೊಲೀಸ್ ಹುದ್ದೆಗಳ ಭರ್ತಿಗೆ ಸರಕಾರ ತೀರ್ಮಾನ
ಕಲಬುರಗಿ: ರಾಜ್ಯದಲ್ಲಿ 10 ರಿಂದ 12 ಸಾವಿರ ಪೊಲೀಸರ ಕೊರತೆಯಿದೆ. ಹೀಗಾಗಿ, ಆ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸವನ್ನು ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸರ ಕೊರತೆಯಿರುವುದು ಎಲ್ಲ ಸರಕಾರಗಳ ಅವಧಿಯಲ್ಲಿಯೂ ಇದ್ದದ್ದೆ. ಅಂತೆಯೇ ಪೊಲೀಸರ ಕೊರತೆಯಿರುವುದು ಸತ್ಯ. ಹೀಗಾಗಿ, ನಮ್ಮ ಸರಕಾರ ಹೆಲವು ಹುದ್ದೆಗಳ ಭರ್ತಿಗೆ ತೀರ್ಮಾನಿಸಿದೆ. ಶೀಘ್ರದಲ್ಲೇ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರು ಕಾನೂನು ಸುವ್ಯವಸ್ಥೆ ಹಾಳಾಗಿದೆ ಎನ್ನುತ್ತಾರೆ. ಇದಕ್ಕೆ ಒಂದೇ ಒಂದು ಉದಾಹರಣೆ ಕೊಡಿ, ಅವರ ಕಾಲದಲ್ಲಿ ಎಷ್ಟು ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು ಎಂಬ ಬಗ್ಗೆ ದಾಖಲೆಯಿದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೇವಲ 48 ಗಂಟೆಗಳಲ್ಲಿ ಮಂಗಳೂರು ದರೋಡೆ ಕೇಸ್ ಪತ್ತೆ ಮಾಡಲಾಗಿದೆ. ಬೀದರ್ ದರೋಡೆ ಪ್ರಕರಣ ಕೂಡ ಕೊನೆಯ ಹಂತದಲ್ಲಿದೆ. ಪೊಲೀಸರು ಈಗಾಗಲೇ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಮುಟ್ಟಿಸಲಿದ್ದಾರೆ ಎಂದರು.


