ರಾಯಚೂರು: ಅಕ್ರಮ ಸಂಬAಧದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ರಾಮದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಳತಾಣದಲ್ಲಿ ವೈರಲ್ ಆಗಿದೆ. ಬಸವರಾಜ್ ಯಂಕಮ್ಮ, ರೇಣುಕಾ ಎಂಬುವವರಿAದ ಈ ಅಮಾನವೀಯ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಹದಿನೈದು ದಿನದ ಹಿಂದೆ ಆರೋಪಿಗಳ ತಂದೆ ರಂಗಪ್ಪ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಅವರ ಕುಟುಂಬಸ್ಥರಿಗೆ ರಂಗಪ್ಪನ ಜತೆ ಈ ಮಹಿಳೆಗೆ ಅಕ್ರಮ ಸಂಬAಧವಿದೆ ಎಂಬ ಅನುಮಾನವಿತ್ತು. ಈ ಹಿನ್ನೆಲೆಯಲ್ಲಿ ಆಕೆಯೇ ಕೊಲೆ ಮಾಡಿರಬಹುದು ಎಂದು ಸಂಶಯವ್ಯಕ್ತಪಡಿಸಿದ್ದರು.
ಈ ಬಗ್ಗೆ ಪೊಲೀಸರಿಗೆ ದೂರನ್ನು ಸಹ ನೀಡಿದ್ದರೂ, ಆದರೆ, ಪೊಲೀಸರ ವಿಚಾರಣೆ ವೇಳೆ ಮಹಿಳೆ ತನ್ನಗೇನೂ ಗೊತ್ತಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಯಲ್ಲಿ ಸತ್ಯಾಂಶವಿರುವುದು ಪೊಲೀಸರಿಗೆ ಕಂಡುಬAದ ಹಿನ್ನೆಲೆಯಲ್ಲಿ ಆಕೆಯನ್ನು ವಿಚಾರಣೆ ನಡೆಸಿ ವಾಪಸ್ ಕಳುಹಿಸಿದ್ದರು.
ಆದರೆ, ರಂಗಪ್ಪ ಕುಟುಂಬಸ್ಥರು ಆಕೆಯೇ ಕೊಲೆ ಮಾಡಿದ್ದಳೆ ಎಂದು ಆರೋಪಿಸಿ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಥಳಿಸಿದ್ದಾರೆ. ಗ್ರಾಮಸ್ಥರೆಲ್ಲ ಸ್ಥಳದಲ್ಲಿದ್ದರೂ ಯಾರೊಬ್ಬರೂ ಆಕೆಯನ್ನು ಬಿಡಿಸಿಕೊಳ್ಳಲು ಬಂದಿಲ್ಲ. ಅದನ್ನು ವಿಡಿಯೋ ಮಾಡಲಾಗಿದ್ದು, ಆ ವಿಡಿಯೋ ವೈರಲ್ ಆಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.