ಬೆಂಗಳೂರು: ತಾಲಿಬಾನಿ ಮನಸ್ಥಿತಿ ಇರುವವರು ಟೆರೆರಿಸ್ಟ್ಗಳು. ತಮ್ಮ ನಂಬಿಕೆಯನ್ನೇ ಎಲ್ಲರೂ ಅನುಸರಿಸಬೇಕು ಎಂಬುದು ಅವರ ವಾದ. ಅದೇ ರೀತಿಯ ವಾದ ಮಂಡನೆ ಮಾಡುವ ಹಿಂದೂ ಮೂಲಭೂತವಾದಿಗಳು ನಿಜವಾದ ಟೆರೆರಿಸ್ಟ್ಗಳು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕುಂಭಮೇಳದ ವಿಚಾರದಲ್ಲಿ ಅವರರವರ ಅಭಿಪ್ರಾಯ ಅವರಿಗೆ ಕೆಲವರು ಅದರಿಂದ ಪುಣ್ಯ ಸಿಗುತ್ತದೆ ಎಂದು ನಂಬುತ್ತಾರೆ. ಮತ್ತೇ ಕೆಲವರು ಸ್ನಾನ ಮಾಡಿದರೆ ಬಡತನ ನಿರ್ಮೂಲನೆ ಆಗುತ್ತಾ ಎಂದು ಪ್ರಶ್ನೆ ಮಾಡುತ್ತಾರೆ. ಹೀಗಾಗಿ, ನಾವು ಎಲ್ಲರ ಭಾವನೆಗಳಿಗೂ ಬೆಲೆ ಕೊಡಬೇಕು. ಅವರವರ ಅಭಿಪ್ರಾಯ ಅವರಿಗೆ ಎಂದರು.
ನಮ್ಮ ತಂದೆಗೆ ದೇವರ ಮೇಲೆ ನಂಬಿಕೆಯಿಲ್ಲ. ನಾನು ದೇವರನ್ನು ನಂಬುತ್ತೇವೆ. ನಾವಿಬ್ಬರೂ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನಾವು ಪರಸ್ಪರ ಭಾವನೆಗಳನ್ನು ಗೌರವಿಸುತ್ತೇವೆ. ದೇಶದಲ್ಲಿಯೂ ಇದೇ ರೀತಿ ಎಲ್ಲರ ಭಾವನೆಗಳಿಗೂ ಗೌರವ ಸಿಗಬೇಕು. ಅದನ್ನೇ ಪ್ರಜಾಪ್ರಭುತ್ವ ಎಂದು ಕರೆಯುವುದು ಎಂದರು.
ಹಿAದೂ ಧರ್ಮದಲ್ಲಿರುವ ನಾಸ್ತಿಕರು ಕೆಲವು ಆಚರಣೆ ಟೀಕಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ವಿರೋಧಿಸಲು ಸಾಧ್ಯವಿಲ್ಲ. ಹಿಂದೂ ಧರ್ಮ ಎಲ್ಲವನ್ನೂ ಒಪ್ಪಿಕೊಂಡು, ನಾಸ್ತಿಕತೆಯನ್ನೂ ಒಪ್ಪಿಕೊಂಡು ಬೆಳೆದಿರುವ ಧರ್ಮ. ಇದನ್ನು ಸಂಕುಚಿತ ಮಾಡುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.
ಕುAಭಮೇಳ ಟೀಕಿಸುವ ಕಾಂಗ್ರೆಸ್ ನಾಯಕರು ಅಯೋಗ್ಯರು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆಗೆ ಉತ್ತರಿಸಿದ ಡಾ. ಯತೀಂದ್ರ, ಹಿಂದೂ ಧರ್ಮದಲ್ಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲ ಟೀಕೆಗಳಿಗೆ ಅವಕಾಶವಿದೆ. ಟೀಕೆಯನ್ನೇ ಅಲ್ಲಗಳೆದವರು ತಾಲಿಬಾನಿ ಮನಸ್ಥಿತಿಯವರು ಎನ್ನಬಹುದು. ಟೀಕೆಸುವವರನ್ನು ಅಯೋಗ್ಯರು ಎನ್ನುವವರು ನಿಜವಾದ ಅಯೋಗ್ಯರು ಎಂದು ಟಾಂಗ್ ನೀಡಿದರು.