ಮುಂಬೈ : 20 ವಿಶ್ವ ಕಪ್ ಗೆದ್ದ ನಂತರ ಭಾರತದ ತಂಡ ಏಕದಿನ ಹಾಗೂ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ತೋರಿಸುತ್ತಿದೆ. ಈ ಕುರಿತಂತೆ ಬಿಸಿಸಿಐ ಈಗ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋಚ್ ತಂಡವನ್ನು ಬದಲಾಯಿಸಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.
ಹೌದು ಭಾರತದ ಪ್ರಸ್ತುತ ಕೋಚ್ ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ಟೀಂ ಇಂಡಿಯಾ ಮುಂದೆ ಸಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬ್ಯಾಟಿಂಗ್ ಕೋಚ್ ನೇಮಕಾತಿಯನ್ನು ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಸದ್ಯ ಮಾಹಿತಿಯ ಪ್ರಕಾರ ವಿಶ್ವದ ಅನೇಕ ಟಾಪ್ ಬ್ಯಾಟರ್ ಗಳ ಹೆಸರು ಕೋಚ್ ಹುದ್ದೆಗೆ ಕೇಳಿ ಬರುತ್ತಿದೆ ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಹಾಗೂ ನಾಯಕ ಕೆವಿನ್ ಪೀಟರ್ಸನ್ ಕೋಚ್ ಹುದ್ದೆಗೆ ಆಸಕ್ತಿಯನ್ನು ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಭಾರತ ತಂಡವು ಟೆಸ್ಟ್ ಸರಣಿಯಲ್ಲಿ ಪದೇ ಪದೇ ಎಡವಿದ್ದರಿಂದ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.
ಸದ್ಯ ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಇದ್ದರೆ, ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ , ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಕಾರ್ಯ ನಿರ್ವಹಿಸುತ್ತಿದ್ದಾರೆ.