ಪುಣೆ: ಹಾರಾಟ ನಡೆಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ವೊಂದು ಇದ್ದಕ್ಕಿದ್ದಂತೆ ನಿಯಂತ್ರಣ ಕಳೆದುಕೊಂಡು ನೆಲಕ್ಕಪ್ಪಳಿಸಿದ್ದು ಇಬ್ಬರು ಫೈಲೆಟ್ ಗಳು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆ ಬಳಿಯ ಪವಾಡ್ ಬಳಿಯ ಖಾಂಡೇವಾಲ ಗ್ರಾಮದ ಕಾಡಿನಲ್ಲಿ ನಡೆದಿದೆ. ಪುಣೆಗೆ ಸುಮಾರು 32 ಕಿ.ಮೀ ದೂರದಲ್ಲಿ ಘಟನೆ ನಡೆದಿದ್ದು, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ.
ಘಟನೆ ನಡೆದಿದ್ದು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತಕ್ಷಣವೇ ಗ್ರಾಮಸ್ಥರು ಮತ್ತು ಪೊಲೀಸರು ಆಗಮಿಸಿ, ಹೆಲಿಕಾಪ್ಟರ್ ನಲ್ಲಿದ್ದವರ ರಕ್ಷಣೆ ಮಾಡಿದ್ದಾರೆ. ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹೆಲಿಕಾಪ್ಟರ್ ಮುಂಬೈನಿಂದ ಹೈದರಾಬಾದ್ ಕಡೆಗೆ ಪ್ರಯಾಣಿಸುತ್ತಿದ್ದು, ಭಾರಿ ಮಳೆ ಸುರಿಯುತ್ತಿದ್ದ ಕಾರಣದಿಂದ ನಿಯಂತ್ರಣ ತಪ್ಪಿತ್ತು. ಅಪಾಯದಿಂದ ಪಾರು ಮಾಡುವ ಪ್ರಯತ್ನದಲ್ಲಿ ವೇಗ ನಿಯಂತ್ರಣ ಮಾಡಿದ ಫೈಲಟ್ ಎಮರ್ಜೆನ್ಸಿ ಲ್ಯಾಂಡಿಂಗ್ ಗೆ ಪ್ರಯತ್ನಿಸಿದರು.
ಆದರೆ, ಲ್ಯಾಂಡಿಂಗ್ ಆಗಲು ಸೂಕ್ತ ಜಾಗ ಸಿಗದೆ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಕಾಡಿನಂಚಿನಲ್ಲಿ ಬಿದ್ದಿದೆ. ಅದೃಷ್ಟವಶಾತ್ ಬೆಂಕಿ ತಗುಲದೆ ಇದ್ದ ಕಾರಣ, ಸ್ಥಳೀಯರು ಓಡಿ ಬಂದು ಪೈಲೆಟ್ ಸೇರಿ ನಾಲ್ವರ ಪ್ರಾಣ ಉಳಿಸಿದ್ದಾರೆ.

