ಮೀರತ್ : 14 ವರ್ಷದ ಅಪ್ರಾಪ್ತ ದಲಿತ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ ಇಬ್ಬರು ವ್ಯಕ್ತಿಗಳು, ಅದನ್ನು ಮುಚ್ಚಿ ಹಾಕಲು ಆಕೆಗೆ 100 ರು. ಭಕ್ಷೀಸು ಕೊಡುತ್ತಿದ್ದರು ಎಂಬ ಕುತೂಹಲಕರ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬುಲಂದ್ ಶಹರ್ ಜಿಲ್ಲೆಯ ಹಳ್ಳಿಯೊಂದರಲ್ಲಿ 14 ವರ್ಷದ ಬಾಲಕಿಯನ್ನು ಅದೇ ಗ್ರಾಮದ ಮೇಲ್ವರ್ಗದ ಇಬ್ಬರು ಯುವಕರು ಬಲವಂತವಾಗಿ ಎಳೆದೊಯ್ದು ರೇಪ್ ಮಾಡಿದ್ದಾರೆ. ನಂತರ ಆಕೆಗೆ 100 ರುಪಾಯಿ ಕೊಟ್ಟು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿ, ಆಕೆಯ ಮೇಲೆ ಎರಡು ವಾರಗಳ ಕಾಲ ಸತತ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ನಾಗೇಶ್ ಸಿಂಗ್ ಮತ್ತು ಹರ್ವೀಂದರ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ, ಪೋಕ್ಸೋ ಹಾಗೂ ಎಸ್ ಸಿ, ಎಸ್ ಟಿ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆಯ ತಂದೆ ಕೆಲ ವರ್ಷದ ಹಿಂದೆ ಮೃತಪಟ್ಟಿದ್ದು ಆಕೆಯ ತಾಯಿ ದಿನಗೂಲಿ ಮಾಡುತ್ತಾ ಜೀವನ ನಡೆಸುತ್ತಿದ್ದರು. ತಾಯಿ, ಇದ್ದಕ್ಕಿದ್ದಂತೆ ಮಗಳ ಬಳಿ ನೂರು ರುಪಾಯಿ ನೋಟುಗಳನ್ನು ನೋಡಿ ಅನುಮಾನಗೊಂಡು ವಿಚಾರಿಸಿದಾಗ ಆಕೆ ಅತ್ಯಾಚಾರಕ್ಕೆ ಒಳಗಾಗಿರುವುದು ಬಯಲಾಗಿದೆ.
ಅತ್ಯಾಚಾರ ಮಾಡಿ, ನೂರು ರು ಕೊಟ್ಟಿದ್ದ ಆರೋಪಿಗಳು: ಚಾಲಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಆರೋಪಿಗಳು ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಎಳೆದೊಯ್ದು ರೇಪ್ ಮಾಡಿದ್ದರು. ನಂತರ ಯಾರಿಗೂ ಹೇಳದಂತೆ ಬೆದರಿಸಿ 100 ರು ನೀಡಿದ್ದರು. ಎರಡು ವಾರಗಳ ಕಾಲ ಸತತವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಲೇ ಬಂದು, ಪ್ರತಿ ಬಾರಿ ಆಕೆಗೆ 100 ರು. ಕೊಡುತ್ತಿದ್ದರು ಎನ್ನಲಾಗಿದೆ. ಆಕೆಯ ಶಾಲಾ ಬ್ಯಾಗ್ ನಲ್ಲಿದ್ದ ಹಣ ಕಂಡು ತಾಯಿ ವಿಚಾರಿಸಿದಾಗ ಅತ್ಯಾಚಾರದ ವಿಚಾರ ಬಯಲಾಗಿದೆ.