ಅಪರಾಧ

ನಕಲಿ ಲೆಟೆರ್ ಹೆಡ್ ಬಳಸಿ ಕೆಲಸ ಕೊಡಿಸಿದ ಆರೋಪ: ಇಬ್ಬರು ಆರೋಪಿಗಳ ಬಂಧನ

Share It

ಬೆಂಗಳೂರು: ಶ್ಯಾಮನೂರು ಶಿವಶಂಕರಪ್ಪ ಹೆಸರಿನ ನಕಲಿ ಲೆಟೆರ್ ಹೆಡ್ ಬಳಸಿ ವಿಧಾನ ಸೌಧ ಸಚಿವಾಲಯದಿಂದ ವೇತನ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಸ್ವಾಮಿ ಮತ್ತು ಅಂಜನ್ ಕುಮಾರ್ ಎಂಬುವವರು ರಾಮನಗರ ಮೂದವರಾಗಿದ್ದು, ಸ್ವಾಮಿ ಶ್ಯಾಮನೂರು ಶಿವಶಂಕರಪ್ಪ ಲೆಟೆರ್ ಹೆಡ್ ಬಳಸಿ ಪತ್ನಿ ವಿನುತಾಗೆ ಆಪ್ತಸಹಾಯಕ ಹುದ್ದೆ ಕೊಡಿಸಿದ್ದ. ಕೆಲಸಕ್ಕೆ ಬರದೇ ಆಕೆ ಹಲವಾರು ತಿಂಗಳು ವೇತನ ಪಡೆದಿದ್ದಳು ಎನ್ನಲಾಗಿದೆ.

ಆರೋಪಿ ಸ್ವಾಮಿ ಹಿಂದೆ ವಿಧಾನಸೌಧ ಸಚಿವಾಲಯದ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಅನಂತರ ಕೆಲಸ ಬಿಟ್ಟು ರಾಜಕಾರಣಿಗಳ ಸಖ್ಯ ಬೆಳೆಸಿಕೊಂಡು ಓಡಾಡುತ್ತಿದ್ದ. ಶ್ಯಾಮನೂರು ಶಿವಶಂಕರಪ್ಪ ಅವರ ನಕಲಿ ಸಹಿ ಮಾಡಿ, ಲೆಟರ್ ನೀಡಿ ಸಚಿವಾಲಯದಿಂದ ಪತ್ನಿಗೆ ಕೆಲಸ ಕೊಡಿಸಿದ್ದ ಎನ್ನಲಾಗಿದೆ.

ಎಸ್. ರಘು ಲೆಟರ್ ಕೂಡ ನಕಲಿ: ಈ ನಡುವೆ ಮತ್ತೊಬ್ಬ ಆರೋಪಿ ಅಂಜನ್ ಕುಮಾರ್ ಎಂಬಾತನಿಗೆ ಕೆಲಸ ಕೊಡಿಸುವ ಸಲುವಾಗಿ ಸ್ವಾಮಿ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು ಅವರ ಲೆಟರ್ ಹೆಡ್ ಮತ್ತು ಸಹಿಯನ್ನು ನಕಲು ಮಾಡಿದ್ದ ಎಂಬ ಅಂಶ ವಿಚಾರಣೆ‌ ವೇಳೆ ಬೆಳಕಿಗೆ ಬಂದಿದೆ.

ಪತ್ನಿಗೆ ನೊಟೀಸ್! : ಆರೋಪಿ ಸ್ವಾಮಿ ಬಂಧಿಸಿರುವ ವಿಧಾನಸೌಧ ಪೊಲೀಸರು, ಕೆಲಸಕ್ಕೆ ಬಾರದೆ ವೇತನ ಪಡೆಯುತ್ತಿದ್ದ ವಿನುತಾಗೆ ನೊಟೀಸ್ ನೀಡಿದ್ದಾರೆ. ಆಕೆ ಅನೇಕ ತಿಂಗಳು ವೇತನ ಪಡೆದು ಕೆಲಸಕ್ಕೆ ಹಾಜರಾಗದೆ ಇರುವ ಕಾರಣ ಸಚಿವಾಲಯದ ಅಧಿಕಾರಿಗಳು ದೂರು ದಾಖಲು ಮಾಡಿದ್ದರು.


Share It

You cannot copy content of this page