ವೈಟ್ ಪೇಪರ್ ಡೆಸ್ಕ್ : ಇಸ್ರೇಲ್ ನಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗುತ್ತಿದ್ದು, ನೆನ್ನೆ ರಾತ್ರಿ 320 ರಾಕೆಟ್ ಗಳನ್ನು ಏಕಾಕಾಲಕ್ಕೆ ಉಡಾವಣೆ ಮಾಡಲಾಗಿದೆ.
ಇಸ್ರೇಲ್ ಸೇನೆಯ 11 ನೆಲೆಗಳನ್ನು ಗುರಿಯಾಗಿಸಿ ಕೊಂಡು ಉಡಾವಣೆಗೊಂಡಿರುವ 320 ರಾಕೆಟ್ ಗಳು ವಿಡಿಯೋ ದಲ್ಲಿ ಸೆರೆಸಿಕ್ಕಿದ್ದು, ಇಸ್ರೇಲ್ ನಿವಾಸಿಗಳು ಭಯಗೊಂಡಿದ್ದಾರೆ.
ಗಾಜಾ ಪಟ್ಟಿ ಮೇಲಿನ ದಾಳಿಗೆ ಸೇಡು ಎಂಬಂತೆ ಇಜ್ಬುಲ್ ಸಂಘಟನೆಗಳು ವರ್ತಿಸುತ್ತಿದ್ದು, ಸಂಘಟನೆಗಳ ನೆರವಿಗೆ ಇರಾನ್ ಕೂಡ ಆಗಮಿಸಿದೆ ಎನ್ನಲಾಗುತ್ತಿದೆ. ಇರಾನ್ ಆಶ್ರಯದಲ್ಲಿ ಅಡಗಿಕೊಂಡಿದ್ದ, ಹಮಾಸ್ ಸಂಘಟನೆ ಮುಖ್ಯಸ್ಥನ ಕೊಲೆಯ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಇಸ್ರೇಲ್ ಮೇಲಿನ ದಾಳಿಯ ಕುರಿತು ಮಾತನಾಡಿರುವ ಪ್ರಧಾನಿ ನೆತ್ಯಾನಹು, ಇಸ್ರೇಲ್ ನಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಿದ್ದಾರೆ. ದೇಶದ ರಕ್ಷಣೆಗಾಗಿ ನಾವು ಸರ್ವಸನ್ನದ್ಧರಾಗಿರುತ್ತೇವೆ ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ಈ ಮೂಲಕ ವಿಶ್ವಯುದ್ಧದ ಭೀತಿ ಜಗತ್ತನ್ನು ಆವರಿಸಿದೆ ಎನ್ನಬಹುದು.

