ಧಾರವಾಡ: ಜಾತಿನಿಂದನೆ ಮೂಲಕ ತಮ್ಮ ಮನಸ್ಥಿತಿಯನ್ನು ಹೊರಹಾಕಿರುವ ಮುನಿರತ್ನ ಶಾಸಕರಾಗಿ ಮದುವರಿಯಲು ಅನಾಲಾಯಕ್ ಎಂದು ಹುಬ್ಬಳ್ಳಿ ಶಾಸಕ ಅಬ್ಬಯ್ಯ ಪ್ರಸಾದ್ ಕಿಡಿಕಾರಿದ್ದಾರೆ.
ಮುನಿರತ್ನ ದಲಿತರ ಬಗ್ಗೆ ತಮಗೆ ಮತ್ತು ತಮ್ಮ ಪಕ್ಷಕ್ಕೆ ಇರುವ ಅಸಹನೆಯನ್ನು ಹೊರಹಾಕಿದ್ದಾರೆ. ಬಿಜೆಪಿ ದಲಿತರನ್ನು ಯಾವ ರೀತಿ ನೋಡುತ್ತದೆ ಎಂಬುದು ಮುನಿರತ್ನ ಅವರ ಮನಸ್ಥಿತಿಯನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ನಾನು ಮೇಲ್ವರ್ಗದ ವ್ಯಕ್ತಿ, ದುಡ್ಡಿರುವ ವ್ಯಕ್ತಿ ಎಂಬ ಅಹಂಕಾರ ಅವರನ್ನು ಈ ರೀತಿ ಮಾತನಾಡುವಂತೆ ಮಾಡಿದೆ. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಬಿಜೆಪಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.