ಅಪರಾಧ ಸಿನಿಮಾ ಸುದ್ದಿ

ಜಾಮೀನು ಅರ್ಜಿ ಸಲ್ಲಿಕೆ ಮಾಡಿದ ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ದರ್ಶನ್ ಜತೆಗೆ ಜೈಲು ಸೇರಿರುವ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ದರ್ಶನ್ ಸೇರಿದಂತೆ ಯಾವುದೇ ಪ್ರಮುಖ ಆರೋಪಿಗಳು ಈವರೆಗೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಪೊಲೀಸರ ತನಿಖೆ ಅಂತಿಮ ಹಂತದಲ್ಲಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಈ ನಡುವೆಯೇ ಪವಿತ್ರಾ ಗೌಡ CCH-57 ನ್ಯಾಯಾಲಯದಲ್ಲಿ ಶೆಕಾಂಗಿಯಾಗಿ ಅರ್ಜಿ ಸಲ್ಲಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈಗಾಗಲೇ ಕೊಲೆ ಪ್ರಕರಣದ ನಂತರ ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ದರ್ಶನ್ ಆಸಕ್ತಿ ವಹಿಸಿಲ್ಲ ಎನ್ನಲಾಗುತ್ತಿದೆ.

ಪತ್ನಿ ಹಾಗೂ ಕುಟುಂಬದ ಬೆಂಬಲ ಹೆಚ್ಚಾಗುತ್ತಿದ್ದಂತೆ ದರ್ಶನ್ ಬದಲಾಗುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಪವಿತ್ರಾ ಸಹವಾಸದಿಂದಲೇ ಇಷ್ಟೆಲ್ಲ ಆಯ್ತು ಎಂಬ ಬಗ್ಗೆ ಅವರನ್ನು ಪಾಪಪ್ರಜ್ಞೆ ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಪವಿತ್ರಾ ಸ್ನೇಹಿತೆ ದರ್ಶನ್ ಜತೆ ಮಾತನಾಡಲು ತೆರಳಿದಾಗ, ಆಕೆಯೊಂದಿಗೆ ದರ್ಶನ್ ಮಾತನಾಡಿಲ್ಲ ಎಂದು ಹೇಳಲಾಗಿತ್ತು.

ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಪವಿತ್ರಾ ಗೌಡ ಏಕಾಂಗಿಯಾಗಿ ಜಾಮೀನು ಕೋರಿ ಅರ್ಜಿ ಅಲ್ಲಿಸುವ ಮೂಲಕ ದರ್ಶನ್ ರಿಂದ ಅಂತರ ಕಾಯ್ದುಕೊಂಡೇ ಕಾನೂನು ಹೋರಾಟ ನಡೆಸುವ ಸುಳಿವು ನೀಡಿದ್ದಾರೆ. ದರ್ಶನ್ ಪರವಾಗಿ ಇಡೀ ಕುಟುಂಬ, ಚಿತ್ರರಂಗ ಮತ್ತು ಅಭಿಮಾನಿಗಳು ನಿಂತಿದ್ದು, ಪವಿತ್ರಾ ತಾನು ಏಕಾಂಗಿ ಎನಿಸಿದೆ. ಹೀಗಾಗಿ, ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.


Share It

You cannot copy content of this page