ತಂದೆಗೆ ಹೆಣ್ಣುಮಕ್ಕಳು ಅಂದ್ರೆ ಪ್ರೀತಿ. ತಾಯಿಗೆ ಗಂಡು ಮಕ್ಕಳು ಅಂದ್ರೆ ಪ್ರೀತಿ ಜಾಸ್ತಿ. ಇದು ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ ಆಗಿದೆ. ಆದ್ರೆ ತಂದೆಯು ಹೆಣ್ಣು ಮಗುವನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಾರೆ. ಹೆಣ್ಣು ಮಗುವು ಹುಟ್ಟಿದ ತಕ್ಷಣ ಖುಷಿ ಪಡುವುದಲ್ಲದೆ ಇವಳು ಹುಟ್ಟಿದ ಮೇಲೆಯೇ ನಮಗೆ ಒಳಿತು ಆಗಿದ್ದು ಅಂತ ಹೇಳುವುದು ಉಂಟು. ಯಾವ ದಿನಾಂಕದಂದು ಹುಟ್ಟಿದ್ದ ಹೆಣ್ಣು ಮಕ್ಕಳು ತನ್ನ ತಂದೆಗೆ ಅದೃಷ್ಟವನ್ನು ತಂದು ಕೊಡಬಲ್ಲರು ಎಂದು ನೋಡೋಣ.
ಸಂಖ್ಯಾಶಾಸ್ತ್ರದ ಪ್ರಕಾರ 3 ನೆಯ ದಿನಾಂಕದಂದು ಅಥವಾ ಒಟ್ಟು ದಿನಾಂಕವನ್ನು ಒಟ್ಟುಗೂಡಿಸಿದಾಗ 3 ಬರುವ ಹೆಣ್ಣು ಮಕ್ಕಳು ತನ್ನ ತಂದೆಗೆ ಅದೃಷ್ಟವನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ದಿನದಂದು ಹುಟ್ಟಿದ ಹೆಣ್ಣು ಮಕ್ಕಳು ಅತ್ಯಂತ ಪ್ರಭಾವಶಾಲಿ ಯಾಗುತ್ತಾರೆ. ಜೊತೆಗೆ ಬಹು ಬೇಗನೆ ಎಲ್ಲರ ವಿಶ್ವಾಸವನ್ನು ಗಳಿಸುವ ಚಾಣಾಕ್ಷ ಬುದ್ಧಿಯವರಾಗಿರುತ್ತಾರೆ.
ಅವರು ಮುಖ್ಯವಾಗಿ ಬದ್ಧತೆಯನ್ನು ಹೊಂದಿರುತ್ತಾರೆ. ಒಂದು ಕೆಲಸಕ್ಕೆ ಕೈ ಹಾಕಿದ ಮೇಲೆ ಅದನ್ನು ಮುಗಿಸಿಯೇ ತಿರುತ್ತಾರೆ. ಅವರಿಗೆ ವಿಶೇಷವಾಗಿ ಲಕ್ಷ್ಮಿಯ ಆಶೀರ್ವಾದವಿರುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.
ಮುಖ್ಯವಾಗಿ ಸಂಖ್ಯೆ 3 ಎಂದರೆ 3, 12, 21 ಮತ್ತು 30 ರಂದು ನಡುವೆ ಜನಿಸುವ ಹೆಣ್ಣು ಮಕ್ಕಳು ಅದೃಷ್ಟ ದೇವತೆಗಳಾಗಿರುತ್ತಾರೆ.
ಇವರು ಸದಾ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಹೆಚ್ಚು ಶ್ರಮ ಜೀವಿಗಳಾದ ಇವರು ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಇವರು ಮುಕ್ತ ಮನಸ್ಸಿನಿಂದ ಕೂಡಿದ್ದು ಎಲ್ಲವನ್ನೂ ನೇರವಾಗಿ ಹೇಳಿಬಿಡುತ್ತಾರೆ. ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಇವರು ಸ್ವಾಭಿಮಾನಿಗಳು. ಯಾರ ಬಳಿಯೂ ಏನನ್ನು ಕೇಳುವುದಿಲ್ಲ. ತಮ್ಮ ಅವಶ್ಯಕತೆಯನ್ನು ತಾವೇ ನೋಡಿಕೊಳ್ಳುತ್ತಾರೆ.