ಅಪರಾಧ ಸುದ್ದಿ

ಕೋಕಾ ಕೋಲಾದಲ್ಲಿ ಹೆಂಡತಿಗೆ ವಿಷಕಾರಿ ವಸ್ತು ಬೆರೆಸಿ ಕೊಲ್ಲುವ ಯತ್ನ: ಮಗಳೊಂದಿಗೆ ಸೇರಿ ಕೃತ್ಯ

Share It

ಇಂಡಿಯಾನ: ಕೋಕಾಕೋಲಾದಲ್ಲಿ ಮತ್ತು ಭರಿಸುವ ವಿಷಕಾರಿ ಡ್ರಗ್ಸ್ ಬೆರೆಸಿ ಮಡದಿಗೆ ನಿತ್ಯ ಕುಡಿಸುತ್ತಿದ್ದ ವ್ಯಕ್ತಿ, ಆಕೆಯನ್ನು ಕೊಂದು ನಂತರ ಆಕೆಯ ಮಗಳ ಜತೆಗೆ ಮದುವೆಯಾಗುವ ಉದ್ದೇಶ ಹೊಂದಿದ್ದ ವಿಚಿತ್ರ ಘಟನೆ ಇಂಡಿಯಾನದಲ್ಲಿ ನಡೆದಿದೆ.

ಇಂಡಿಯಾನಾ ಸ್ಟೇಟ್ ಕೋರ್ಟ್ ಈ ಕುರಿತು ಆಗಸ್ಟ್ ೨೬ರಂದು ಮಾಡಿರುವ ಆದೇಶದ ಪ್ರಕಾರ ಆರೋಪಿಗೆ ೪ ವರ್ಷಗಳ ಜೈಲು ಶಿಕ್ಷೆ ನೀಡಲಾಗಿದ್ದು, ನಂತರ ಐದು ವರ್ಷಗಳ ಟ್ರಯಲ್ ಶಿಕ್ಷೆಗೆ ಒಳಪಡಿಸಲಾಗಿದೆ. ಆಲ್ಫ್ರೆಡ್ ರೂಫ್ ಎಂಬ 71 ವರ್ಷದ ವ್ಯಕ್ತಿ, ತನ್ನ ಹೆಂಡತಿಗೆ ಕೋಕಾ-ಕೋಲಾ ಜತೆಗೆವಿಷಕಾರಿ “ಆಫ್-ವೈಟ್ ಪೌಡರ್ ವೊಂದನ್ನು ನಿತ್ಯವು ಬೆರೆಸಿ ಕೊಡುತ್ತಿದ್ದ ಎಂಬುದನ್ನು ಆತ ಒಪ್ಪಿಕೊಂಡಿದ್ದಾನೆ.

ಆತ ಬೆರೆಸುತ್ತಿದ್ದ ವಸ್ತು ಹೊಂದಿರುವ ಮಾತ್ರೆ ಬಾಟಲಿ ಮತ್ತು ಆಫ್-ವೈಟ್ ಶೇಷದೊಂದಿಗೆ ತೆರೆದ ಕೋಕಾ-ಕೋಲಾ ಕ್ಯಾನ್ ಅನ್ನು ಹಸ್ತಾಂತರಿಸುವ ಮೂಲಕ ಪತ್ನಿ ತನ್ನ ಪತಿಯ ವಿರುದ್ಧ ವೇಯ್ನ್ ಕೌಂಟಿ ಶೆರಿಫ್ ಇಲಾಖೆಗೆ ದೂರು ನೀಡಿದ್ದು, ಪತ್ನಿಯ ದೇಹದಲ್ಲಿ ಡ್ರಗ್ಸ್ ಸೇರಿರುವುದು ದೃಢಪಟ್ಟಿದೆ.

ರೂಫ್ ಪತ್ನಿಗೆ ಎಂಡಿಎಂಎ, ಕೊಕೇನ್ ಮತ್ತು ಬೆಂಜೊಡಿಯಜೆಪೈನ್ ಪರೀಕ್ಷೆ ನಡೆಸಿದ್ದು, ಪಾಸಿಟೀವ್ ಎಂದು ದೃಢಪಟ್ಟಿದೆ. ಆಕೆಯ ದೇಹಕ್ಕೆ ಈ ಎಲ್ಲ ವಸ್ತುಗಳ ಸೇರಲು ತಾನು ನಿತ್ಯವೂ ಆಕೆಗೆ ಕೋಕಾ ಕೋಲಾದಲ್ಲಿ ಆಕೆಯ ಮಗಳು ನೀಡಿದ ವೈಟ್ ವಸ್ತುಗಳನ್ನು ಬೆರೆಸಿಕೊಡುತ್ತಿದ್ದದ್ದು ಕಾರಣ ಎಂದು ರೂಪ್ ಒಪ್ಪಿಕೊಂಡಿದ್ದಾನೆ. ಜತೆಗೆ, ತನ್ನ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು, ಆಕೆಯ ಅನಾರೋಗ್ಯದ ಸಮಸ್ಯೆಗಾಗಿ ಅನೇಕ ಬಾರಿ ಅವಳನ್ನು ವೈದ್ಯರ ಬಳಿಗೆ ಕರೆದೊಯ್ದ ಬಗ್ಗೆಯೂ ಆತ ನ್ಯಾಯಾಲಯದ ಮುಂದೆ ವಿವರಿಸಿದ್ದಾನೆ.

ರೂಪ್ 31 ವರ್ಷದ ಮಗಳೊಂದಿಗೆ ಲೈಂಗಿಕ ಸಂಪರ್ಕ ಬೆಳಸುವ ಉದ್ದೇಶದಿಂದ ಆಕೆ ನೀಡಿದ ಡ್ರಗ್ಸ್ ಅನ್ನು ಮಡದಿಗೆ ನಿತ್ಯವೂ ಕೋಕಾಕೋಲಾದಲ್ಲಿ ನೀಡುತ್ತಿದ್ದ. ಅದನ್ನು ಸೇವಿಸುತ್ತಿದ್ದ ಆಕೆ 13 ಗಂಟೆಗಳ ಕಾಲ ಗಾಢ ನಿದ್ರೆಗೆ ಜಾರುತ್ತಿದ್ದಳು. ಈ ವೇಳೆ ಮಗಳೊಂದಿಗೆ ಆತ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಸತತವಾಗಿ ಡ್ರಗ್ಸ್ ಬಳಸಿ, ಆಕೆಯನ್ನು ಕೊಲ್ಲುವುದು ಇವರಿಬ್ಬರ ಉದ್ದೇಶವಾಗಿತ್ತು ಎನ್ನಲಾಗಿದೆ.

ಮಗಳು ಮತ್ತು ಆಕೆಯ ಸ್ನೇಹಿತೆ ರೂಪ್‌ಗೆ ತನ್ನ ಮಡದಿಗೆ ಡ್ರಗ್ಸ್ ಬೆರೆಸುವಂತೆ ಸೂಚಿಸುತ್ತಿದ್ದರು. ಆಕೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಜತೆಗೆ, ಹೀಗಾಗಿ, 2021 ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ ಪದೇಪದೆ ಮಾದಕ ವಸ್ತು ಬೆರೆಸಿ ಹೆಂಡತಿಯನ್ನು ಕೊಲ್ಲಲು ಮುಂದಾಗಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಅನಂತರ ಮಗಳೊಂದಿಗೆ ಮದುವೆ ಮಾಡಿಕೊಳ್ಳಲು ಈ ಇಬ್ಬರು ಯೋಚಿಸಿದ್ದರು.

ಅದಲ್ಲದೇ, ರೂಪ್ ಮನೆ ಮಾರಾಟಕ್ಕೆ ಸಜ್ಜಾಗಿದ್ದ, ಆ ಪ್ರಕ್ರಿಯೆಯಿಂದ ತಾಯಿಯನ್ನು ಹೊರಗಿಡಬೇಕು ಎಂಬ ದುರಾಸೆಯೂ ಮಗಳಿಗಿತ್ತು ಎಂಬುದನ್ನು ತಪ್ಪೊಪ್ಪಿಗೆ ವೇಳೆ ಉಲ್ಲೇಖಿಸಿದ್ದಾನೆ. ಆಕೆಯ ಜೀವ ವಿಮಾ ಪಾಲಿಸಿಯಿಂದ ಬರುವ ಹಣದ ಮೇಲೆಯೂ ಮಗಳು ಕಣ್ಣಿಟ್ಟಿದ್ದಳು ಎನ್ನಲಾಗಿದೆ.

ಈ ನಡುವೆ ಪಾಶ್ಚಾತ್ತಪಕ್ಕೆ ಒಳಪಟ್ಟ ರೂಪ್ ತನ್ನ ಹೆಂಡತಿ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ, ಆಕೆ ತನಗೆ ನೀಡಿದ ವಿಷಕಾರಿ ವಸ್ತುಗಳು ಮತ್ತು ಅದಕ್ಕೆ ಬಳಸಿದ ಪದಾರ್ಥಗಳನ್ನು ಪೊಲೀಸರಿಗೆ ನೀಡಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ. ಮಗಳ ಮತ್ತು ಆಕೆಯ ಗೆಳತಿಯ ವಿಚಾರಣೆ ನಡೆಯುತ್ತಿದೆ.


Share It

You cannot copy content of this page