ಬೆಂಗಳೂರು: ಪ್ರಸನ್ನ ಥಿಯೇಟರ್ ಬಳಿ ದರ್ಶನ್ ಪುಂಡಾಟ ಮಿತಿಮೀರಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರಿಯ ಸಿನಿಮಾ ಬಿಡುಗಡೆಯಾದ ಕಾರಣದಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಪೊಲೀಸರು ಅತಿರೇಕದ ವರ್ತನೆ ತೋರದಂತೆ ಮನವಿ ಮಾಡಿಕೊಂಡಿದ್ದರು.
ಪೊಲೀಸರ ಮನವಿ ನಡುವೆಯೂ ಥಿಯೇಟರ್ ಬಳಿ ದರ್ಶನ್ ಅಭಿಮಾನಿಗಳು ಪುಂಡಾಟ ಮೆರೆದಿದ್ದರು. ಪೊಲೀಸರು ಮತ್ತು ಉಳಿದ ಸಾರ್ವಜನಿಕರ ವಿರುದ್ಧ ಕೂಗುವುದು, ಕಿರುಚುವುದು ಮಾಡುತ್ತಿದ್ದರು. ಪೊಲೀಸರು ಮೈಕ್ ನಲ್ಲಿ ಮನವಿ ಮಾಡಿಕೊಂಡರು ಕೇಳಿಸಿಕೊಳ್ಳದೆ ಕೃತ್ಯ ನಡೆಸಿದ್ದರು.
ದರ್ಶನ್ ಅಭಿಮಾನಿಗಳ ಪುಂಡಾಟ ಮಿತಿಮೀರುತ್ತಿದ್ದಂತೆ ಪೊಲೀಸರು ನಾಲ್ವರು ಅಭಿಮಾನಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರಿಗೆ ಎಚ್ಚರಿಕೆ ನೀಡಿದ್ದು, ಗಂಭೀರವಾಗಿ ಸಿನಿಮಾ ನೋಡಿ ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿದ್ದು, ಸ್ಥಳೀಯರಿಗೆ ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.
Updating…