ಅಪರಾಧ ಸಿನಿಮಾ ಸುದ್ದಿ

ಪವಿತ್ರಾಗೌಡ ಜಾಮೀನು ಅರ್ಜಿ ತೀರ್ಪನ್ನು ಆಗಸ್ಟ್ 31 ಕ್ಕೆ ಕಾಯ್ದಿರಿಸಿದ ನ್ಯಾಯಾಲಯ

Share It

ಬೆಂಗಳೂರು: ರೇಣುಕಾಸ್ವಾಮಿ ಕೊಲೆಯ A1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪನ್ನು ಆಗಸ್ಟ್ 31 ಕ್ಕೆ ಕಾಯ್ದಿರಿಸಿದೆ.

ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯದಲ್ಲಿ ಪವಿತ್ರಾ ಗೌಡ ಮತ್ತು ಅನುಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ಆರೋಪಿ ಪರ ವಕೀಲರು, ಆರೋಪಿಗಳಿಗೆ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು.

ಸರಕಾರಿ ವಕೀಲರು, ಜಾಮೀನು ನೀಡಲು ತಕರಾರು ತೆಗೆದು, ಜಾಮೀನು ನೀಡದಂತೆ ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ತೀರ್ಪನ್ನು ಆಗಸ್ಟ್ 31 ಕ್ಕೆ ಕಾಯ್ದಿಸಿತು.


Share It

You cannot copy content of this page