ಕಲಬುರಗಿ: ಕಲಬುರಗಿಯ ಹುಮನಾಬಾದ್ ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.
ಮಹಮ್ಮದ್ ನದೀಮ್ ಬೆಂಕಿ ಹಚ್ಚಿದಾತ. ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಸಿಬ್ಬಂದಿ ಜೊತೆ ಜಗಳವಾಡಿ ಪೆಟ್ರೋಲ್ ಹಚ್ಚಿ ಶೋ ರೂಂಗೆ ಬೆಂಕಿ ಹಚ್ಚಿದ್ದು, ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಧ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರಂಭದಲ್ಲಿ ಎಲ್ಲರೂ ಶಾಟ್೯ ಸಕ್ರ್ಯೂಟ್ ನಿಂದ ಬೆಂಕಿ ತಗುಲಿದೆ ಎಂದುಕೊಂಡಿದ್ದರು. ಆದರೆ ಪೊಲೀಸರ ತನಿಖೆ ವೇಳೆ ಬೆಂಕಿ ಹಚ್ಚಿದ್ದು ಪತ್ತೆಯಾಗಿದೆ.

