ಅಪರಾಧ ಸುದ್ದಿ

ಮಣಿಪುರದಲ್ಲಿ ಹೆಚ್ಚಾದ ಹಿಂಸಾಚಾರ: ಪ್ರತಿಭಟನಕಾರರಿಂದ CRPF ಯೋಧರ ಮೇಲೆ ಕಲ್ಲು ತುರಾಟ

Share It

ಗುವಾಹಟಿ: ಮಣಿಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ, ಹಿಂಸಾಚಾರ ಹೆಚ್ಚಾಗಿದ್ದು, ಮಣಿಪುರದ ರಾಜಭವನದ ಹೊರಗೆ ಮಾಜಿ ಸೈನಿಕನ ಮೃತದೇಹವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಪ್ರತಿಭಟನಾಕಾರರು ಮತ್ತು ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಜನಾಂಗೀಯ ಹಿಂಸಾಚಾರ-ಪೀಡಿತ ಮಣಿಪುರದಲ್ಲಿ ಡ್ರೋಣ್ ಮೂಲಗಳ ದಾಳಿಗಳನ್ನು ನಡೆಸಲಾಗುತ್ತಿದೆ. ಈ ದಾಳಿಗಳಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು ಹನ್ನೆರಡು ಜನರು ಗಾಯಗೊಂಡಿದ್ದಾರೆ. ಈ ಡ್ರೋಣ್ ದಾಳಿಗಳನ್ನು ವಿರೋಧಿಸಿ ಇಂಫಾಲ್ ಪಶ್ಚಿಮ, ಕಕ್ಚಿಂಗ್ ಮತ್ತು ತೌಬಲ್ ಜಿಲ್ಲೆಗಳಾದ್ಯಂತ ವಿದ್ಯಾರ್ಥಿಗಳು ರ್ಯಾಲಿಗಳನ್ನು ನಡೆಸಿದರು.

ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಿದ್ದರೂ ಸಾವಿರಾರು ಜನರು ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದುಕೊಂಡು ತಮ್ಮ ಸಮವಸ್ತ್ರವನ್ನು ಧರಿಸಿ ಹೊರಬಂದಿದ್ದರು. ಪ್ರತಿಭಟನಾಕಾರರು ರಾಜಭವನದ ಹೊರಗೆ ಘೋಷಣೆಗಳನ್ನು ಕೂಗಿದರು.

ಇದೇ ವೇಳೆ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಮತ್ತು 50 ಶಾಸಕರು ‘ನೈತಿಕ ಆಧಾರದ ಮೇಲೆ’ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ನಾಗಾ ಮತ್ತು ಕುಕಿ-ಜೋ ಸಮುದಾಯದ ತಲಾ 10 ಸೇರಿದಂತೆ ಮಣಿಪುರವು 60 ಶಾಸಕರನ್ನು ಹೊಂದಿದೆ.


Share It

You cannot copy content of this page