ಬೆಂಗಳೂರು: ಇಬ್ಬರು ಹೆಣ್ಣು ಮಕ್ಕಳನ್ನು ಮಲೆತಂದೆ ಕೊಚ್ಚಿಕೊಂದಿರುವ ಧಾರುಣ ಘಟನೆ ನಗರದ ದಾಸರಹಳ್ಳಿಯ ಕಾವೇರಿ ಬಡಾವಣೆಯಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ಮಹಿಳೆಯೊಬ್ಬರು ತನ್ನ 14 ಮತ್ತು 15 ವರ್ಷದ ಇಬ್ಬರು ಹೆಣ್ಣುಮಕ್ಕಳ ಜತೆಗೆ ವಾಸವಿದ್ದರು. ಆಕೆಯ ಎರಡನೇ ಪತಿ ಇವರ ಜತೆಗೆ ವಾಸವಾಗಿದ್ದ ಎನ್ನಲಾಗಿದೆ.
ಆದರೆ, ಇಂದು ಮಧ್ಯಾಹ್ನ 3.30 ರ ವೇಳೆಗೆ ಮನೆಗೆ ಆಗಮಿಸಿದ ಮಲತಂದೆ ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಕೊಚ್ಚಿಕೊಲೆ ಮಾಡಿದ್ದಾನೆ. ಈ ವೇಳೆ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಅನಿತಾ ಈ ಸಂಬಂಧ ದೂರು ನೀಡಿದ್ದು, ತಂದೆ ತಲೆಮರೆಸಿ ಕೊಂಡಿದ್ದಾನೆ. ಅಮೃತಹಳ್ಳಿ ಪೊಲೀಸರು ಆರೋಪಿಯ ಶೋಧಕ್ಕೆ ಬಲೆ ಬೀಸಿದ್ದಾರೆ.

