ರಾಜಕೀಯ ಸುದ್ದಿ

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ಬಿ,ಆರ್. ಪಾಟೀಲ್ ರಾಜೀನಾಮೆ

Share It

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ನೊಳಗೆ ತಳಮಳ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ಸಲಹೆಗಾರ ಸ್ಥಾನಕ್ಕೆ ಆಳಂದ ಶಾಸಕ ಬಿ.ಆರ್.,ಪಾಟೀಲ್ ರಾಜೀನಾಮೆ ನೀಡಿದ್ದಾರೆ.

ನೆನ್ನೆ ಸಂಜೆಯೇ ಸಿಎಂ ಕಚೇರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಕೆ ಮಾಡಿರುವ ಪಾಟೀಲ್, ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ್ದಾರೆ. ಆದರೆ, ರಾಜಕೀಯ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಸಿಎಂ ಕಚೇರಿಯಲ್ಲಿ ಸಲಹೆಗಾರರ ನಡುವಿನ ವೈಮನಸ್ಯ ರಾಜೀನಾಮೆಗೆ ಕಾರಣ ಎನ್ನಲಾಗುತ್ತಿದೆ.

ಸಿಎಂ ಬದಲಾವಣೆ, ದಲಿತ ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಪಕ್ಷದೊಳಗೆ ಅನೇಕ ಬೆಳವಣಿಗೆಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸಿಎಂ ಸಲಹೆಗಾರರ ರಾಜೀನಾಮೆ ಕುತೂಹಲ ಮೂಡಿಸಿದೆ. ಸರಕಾರದಲ್ಲಿ ಎಲ್ಲವೈ ಸರಿಯಿಲ್ಲ ಎಂಬುದನ್ನು ಈ ರಾಜೀನಾಮೆ ಬಿಂಬಿಸುತ್ತದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


Share It

You cannot copy content of this page